Asianet Suvarna News Asianet Suvarna News

ನೀವು ನೋಡಿದ್ದು 'ಕಾಂತಾರ 2', ಪಾರ್ಟ್ 1 ಮುಂದೆ ಬರುತ್ತೆ: ರಿಷಬ್ ಶೆಟ್ಟಿ

ನೀವು ನೋಡಿರೋದು ಕಾಂತಾರ ಪಾರ್ಟ್ 1 ಸಿನಿಮಾ ಅಲ್ಲ, ಅದು ಕಾಂತಾರ ಪಾರ್ಟ್-2 ಅಂತೆ. ಹಾಗಂತ ಇದನ್ನು ನಾವು ಹೇಳ್ತಿಲ್ಲ. ಸ್ವತಃ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿನೇ ಹೇಳಿದ್ದಾರೆ. 
 

ಕಾಂತಾರ ಸಿನಿಮಾದ ಮುಂದುವರೆದ ಭಾಗ ಬರಲಿ ಅನ್ನೋ ಆಸೆ ಕಾಂತಾರ ಸಿನಿಮಾ ನೋಡಿದ ಎಲ್ಲರಲ್ಲೂ ಇದೆ. ಕಾಂತಾರದಲ್ಲಿ ಶಿವ ಲೀಲಾ ಲವ್ ಸ್ಟೋರಿ ಜತೆ ಉಳ್ಳವರು ಮತ್ತು ಇಲ್ಲದವರ ಮಧ್ಯೆ ನಡೆಯೋ ಸಂಘರ್ಷ ಹಾಗೂ ನಮ್ಮ ಸಂಸ್ಕೃತಿಯ ಆಚರಣೆ, ನಂಬಿಕೆ ಎಲ್ಲವನ್ನೂ ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ರು ಶೆಟ್ರು. ಆದ್ರೆ ಇಂಟ್ರೆಸ್ಟಿಂಗ್ ಅಂದ್ರೆ ಇದು ಕಾಂತಾರ ಪಾರ್ಟ್ 2 ಸಿನಿಮಾ ಅಂತ ರಿಷಬ್ ಶೆಟ್ಟಿ ಓಪನ್ ಆಗಿಯೇ ಹೇಳಿದ್ದಾರೆ. ಕಾಂತಾರ ಪಾರ್ಟ್-2 ಬರಲಿ ಅಂತ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೆಲ್ಲಾ ನೋಡಿರೋ ರಿಷಬ್ ನೀವು ನೋಡಿರೋ ಸಿನಿಮಾ ಕಾಂತಾರ ಪಾರ್ಟ್2 ಅಂತ ಹೇಳಿದ್ದು, ಮುಂದೆ ಬರೋದು ಕಾಂತಾರದ ಮೊದಲ ಭಾಗ ಎಂದು ಕಾಂತಾರದ ಮತ್ತೊಂದು ಅಡೀಷನ್ ಬರೋದನ್ನು ಶೆಟ್ರು ಪಕ್ಕಾ ಮಾಡಿದ್ದಾರೆ.