ಎಲ್ಲೆಲ್ಲೂ ಕಾಂತಾರ ಆರಾಧನೆ: ರಿಷಬ್ ಶೆಟ್ಟಿಯಲ್ಲಿ ದೇವರನ್ನು ಕಂಡ ಫ್ಯಾನ್ಸ್

ಕಾಂತಾರ ಸಿನಿಮಾ ಭಾರತದ ಸಿನಿ ದುನಿಯಾವನ್ನೇ ತಲ್ಲಣ ಮಾಡಿದ್ದು, ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. ನಮ್ಮ ಭಾಷೆಯ ಗಡಿಯನ್ನು ದಾಟಿಕೊಂಡು ಸಿನಿಮಾ ಮುನ್ನುಗ್ಗುತ್ತಿದ್ದು, ರಿಷಬ್ ಶೆಟ್ಟಿಯಲ್ಲಿ ದೇವರನ್ನು ಕಾಣುತ್ತಿದ್ದಾರೆ ಪ್ರೇಕ್ಷಕರು.
 

Share this Video
  • FB
  • Linkdin
  • Whatsapp

ಕಾಂತಾರ ಸಿನಿಮಾ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು,ಡಾ. ರಾಜ್ ಕುಮಾರ್ ಹಾಗೂ ಎನ್.ಟಿ.ಆರ್ ಅವರಂತೆ ರಿಷಬ್ ಶೆಟ್ಟಿಯನ್ನು ಅಭಿಮಾನಿಗಳು ಆರಾಧಿಸುತ್ತಿದ್ದಾರೆ. ಪೌರಾಣಿಕ ಪಾತ್ರಕ್ಕೆ ಎನ್.ಟಿ.ಆರ್ ಹಾಗೂ ರಾಜ್ ಕುಮಾರ್ ಹೆಚ್ಚು ಪ್ರಸಿದ್ಧಿ ಪಡೆದವರು. ಅವರಲ್ಲಿ ಅಭಿಮಾನಿಗಳು ದೇವರನ್ನು ಕಂಡಿದ್ದಾರೆ. ಅದರಂತೆ ಇದೀಗ ರಿಷಬ್ ಕೂಡ ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

Related Video