ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಹಸೆಮಣೆ ಏರಲು ಸಜ್ಜಾದ ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ವಿಜಯ್ ದೇವರಕೊಂಡ ಜೊತೆ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಶ್ಮಿಕಾ ಮುಂದಿನ ವರ್ಷ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ.

First Published Dec 6, 2024, 11:21 PM IST | Last Updated Dec 6, 2024, 11:23 PM IST

ಸ್ಯಾಂಡಲ್​ವುಡ್​​ನಿಂದ ಟಾಲಿವುಡ್​ಗೆ ಹೋಗಿ ಅಲ್ಲಿ ನಂ.1 ನಟಿಯಾದ ರಶ್ಮಿಕಾ, ಅಷ್ಟೇ ಬೇಗ ಬಾಲಿವುಡ್ ಗೆ  ಕಾಲಿಟ್ಟು ಹಿಟ್ ಮೇಲೆ ಹಿಟ್ ಕೊಟ್ಟು ನ್ಯಾಷನಲ್ ಕ್ರಶ್ ಆದ್ರು. ಕಳೆದ ವರ್ಷ ಅನಿಮಲ್ ಮೂವಿ ಬಂದ ಮೇಲಂತೂ ರಶ್ಮಿಕಾ ಇಡೀ ಇಂಡಿಯನ್ ಇಂಡಸ್ಟ್ರಿಯಲ್ಲೇ ನಂ.1 ನಟಿಮಣಿ ಪಟ್ಟಕ್ಕೆ ಹತ್ತಿರ ಬಂದಿದ್ದಾರೆ. ಸದ್ಯ ಸಲ್ಮಾನ್ ಖಾನ್ ಜೊತೆಗೆ   ಸಿಕಂದರ್ ಸಿನಿಮಾದಲ್ಲಿ ನಟಿಸ್ತಾ ಇರೋ ರಶ್ಮಿಕಾ, ಅದಕ್ಕೆ ಪಡೆದಿರೋ ಸಂಭಾವನೆ ಬರೊಬ್ಬರಿ 10 ಕೋಟಿ. ಇಡೀ ಇಂಡಿಯನ್ ಸಿನಿಲೋಕದಲ್ಲಿ ಅತಿಹೆಚ್ಚು ಸಂಭಾವನೆ ಪಡೆದಿರೋ ನಟಿ ಅನ್ನೋ ಪಟ್ಟ ಗಳಿಸಿಕೊಂಡಿದ್ದಾರೆ ರಶ್ಮಿಕಾ. 

ಇಷ್ಟೆಲ್ಲಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಹೊತ್ತಲ್ಲೇ ರಶ್ಮಿಕಾ, ಹಸೆಮಣೆ ಏರೋದಕ್ಕೂ ಟೈಂ ಫಿಕ್ಸ್ ಮಾಡಿದ್ದಾರೆ. ಕಳೆದ 6 ವರ್ಷಗಳಿಂದಲೂ ರೌಡಿ ಬಾಯ್ ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ  ಡೇಟಿಂಗ್ ಮಾಡ್ತಾ ಇದ್ದು, ಈ ಜೋಡಿ ಮುಂದಿನ ವರ್ಷ ಅಧಿಕೃತವಾಗಿ ಎಂಗೇಜ್ ಆಗಲಿಕ್ಕೆ ತೀರ್ಮಾನಿಸಿದೆಯಂತೆ. ಕೆಲ ದಿನಗಳ ಹಿಂದಷ್ಟೇ ವಿಜಯ್ ದೇವರಕೊಂಡ ತಾನು ಸಿಂಗಲ್ ಅಲ್ಲ ಅಂತ ಸಾರಿದ್ರು. ಇನ್ನೂ ಇದೇ ಪುಷ್ಪ-2 ರಿಲೀಸ್ ಇವೆಂಟ್​​ನಲ್ಲಿ ರಶ್ಮಿಕಾ ತನ್ನ ಪ್ರೀತಿಯ ವಿಚಾರ ಎಲ್ಲರಿಗೂ ಗೊತ್ತಿದೆ ಅಂತ ಖುಲ್ಲಂ ಖುಲ್ಲಂ ಹೇಳಿದ್ರು. ಈ ಇವೆಂಟ್​ಗೂ ಮುನ್ನ ಇಬ್ಬರೂ ರೆಸ್ಟೊರೆಂಟ್​​ವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ರು. ಇವರಿಬ್ಬರ ನಡೆ ನೋಡಿದವರು 2025ರಲ್ಲಿ ಶ್ರೀವಲ್ಲಿ ಕಲ್ಯಾಣ ಫಿಕ್ಸ್ ಅಂತಿದ್ದಾರೆ.