Asianet Suvarna News Asianet Suvarna News

ಸೀತಾಪಹರಣ ಮಾಡಿದ್ದಕ್ಕೆ ಜನರ ಭಾವುಕರಾದ 'ರಾವಣ'!

ದೂರದರ್ಶನವನ್ನು ಮತ್ತೆ ನಂಬರ್ ಒನ್ ಮಾಡಿದ ರಾಮಾಯಣ/ ಸೀತಾಪಹರಣದ ದೃಶ್ಯ ನೋಡಿ ಭಾವುಕನಾದ ರಾವಣ/  ಜನರಿಗೆ ಕೈಮುಗಿದು ಕ್ಷಮೆಯಾಚಿಸಿದ 84ರ ಕಲಾವಿದ ಅರವಿಂದ್ ತ್ರಿವೇದಿ.

ನವದೆಹಲಿ(ಏ. 13) ಅದು ಎಷ್ಟೇ ಹೊಸ ವಾಹಿನಿಗಳು ಬಂದರೂ ಹೋದರೂ ದೂರದರ್ಶನದ ತಾಕತ್ತು ಅದಕ್ಕೆ ಇದೆ.  ಲಾಕ್ ಡೌನ್ ಕಾರಣಕ್ಕೆ ರಾಮಾಯಣ ಧಾರಾವಾಹಿ ಮರುಪ್ರಸಾರ ಮಾಡಲಾಗುತ್ತಿದೆ.   ರಮಾನಂದ ಸಾಗರ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣ ಧಾರಾವಾಹಿ 33 ವರ್ಷಗಳ ಬಳಿಕ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದರೂ ಜನಪ್ರಿಯತೆ ಒಂದೇ ಒಂದು ಚೂರು ಕಡಿಮೆ ಆಗಿಲ್ಲ.

ಈ ಧಾರಾವಾಹಿಯಲ್ಲಿ ಪ್ರಚಂಡ ರಾವಣನಾಗಿ ಅಬ್ಬರಿಸಿರುವ ಕಲಾವಿದ ಅರವಿಂದ್ ತ್ರಿವೇದಿ. ಈಗವರಿಗೆ ಸರಿಸುಮಾರು 84 ವರ್ಷ. ಈ ಇಳಿ ವಯಸ್ಸಿನಲ್ಲಿ ಟಿವಿ ಮುಂದೆ ಕುಳಿತು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸುತ್ತಿರುವ ವಿಡಿಯೋ  ವೈರಲ್ ಆಗಿದೆ.

ಮೋದಿ ಅಡ್ವಾಣಿ ಜತೆ ರಾಮಾಯಣದ ಸೀತೆ

ಸೀತಾಪಹರಣ ದೃಶ್ಯ ನೋಡಿದ ತ್ರಿವೇದಿ ತಮ್ಮ ಅಭಿನಯ ನೋಡಿ ತಾವೇ ಭಾವುಕರಾಗಿದ್ದಾರೆ. ಸನ್ನಿವೇಶದ ಬಳಿಕ ತಮ್ಮ ಎರಡೂ ಕೈಗಳನ್ನು ಜೋಡಿಸಿದ್ದಾರೆ.  ಅಮೋಘ ನಟನಿಗೆ ಒಂದು ಅಭಿನಂದನೆ ಇಲ್ಲಿಂದಲೇ ಸಲ್ಲಿಸೋಣ.