
ಹಿಂದಿಯವರಿಗೆ ಕನ್ನಡದ ಬಗ್ಗೆ ಗೊತ್ತಿರಲಿಲ್ಲ, ಇಂದು ವಿಶ್ವವೇ ಮಾತಾಡುತ್ತಿದೆ- RGV
ಹಿಂದಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಗೊತ್ತಿರಲಿಲ್ಲ. ಅವರು ಮದ್ರಾಸ್ ಎಂದು ಗುರುತಿಸುತ್ತಿದ್ದರು. ಕನ್ನಡ ಚಿತ್ರರಂಗವನ್ನು ತುಂಬಾ ಚಿಕ್ಕದು ಎಂದು ಭಾವಿಸಿದ್ದರು. . ಆದರೀಗ ಇಡೀ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಎಂದು ಆರ್ ಜಿ ವಿ ಹೇಳಿದರು.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಮ್ ಮತ್ತು ಉಪೇಂದ್ರ ಕಾಂಬಿನೇಷನ್ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಚಿತ್ರಕ್ಕೆ I am R ಹೆಸರಿಡಲಾಗಿದೆ. ಚಿತ್ರದ ಟೈಟಲ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಮಾತನಾಡಿದ ಆರ್ ಜಿ ವಿ, ಹಿಂದಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಗೊತ್ತಿರಲಿಲ್ಲ. ಅವರು ಮದ್ರಾಸ್ ಎಂದು ಗುರುತಿಸುತ್ತಿದ್ದರು. ಕನ್ನಡ ಚಿತ್ರರಂಗವನ್ನು ತುಂಬಾ ಚಿಕ್ಕದು ಎಂದು ಭಾವಿಸಿದ್ದರು. ಕನ್ನಡ ಭಾಷೆಯ ಬಗ್ಗೆನೇ ಗೊತ್ತಿರಲಿಲ್ಲ. ಆದರೀಗ ಇಡೀ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಪ್ರಶಾಂತ್ ನೀಲ್ ಮತ್ತು ಯಶ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಉಪೇಂದ್ರ ನನಗೆ ನಿರ್ದೇಶನದ ಸಮಯದಿಂದ ಗೊತ್ತು ಎಂದು ಹೇಳಿದರು.