Asianet Suvarna News Asianet Suvarna News

ರಜನಿಕಾಂತ್​ಗೆ ಮಾಲಿವುಡ್​​ ಜಗತ್ತಿನ ಟೆನ್ಷನ್: 'ಗ್ರೇಟ್ ಎಸ್ಕೇಪ್' ಎಂದ ಸೂಪರ್​​ ಸ್ಟಾರ್‌ಗೆ ನೆಟ್ಟಿಗರಿಂದ ಫುಲ್ ಕ್ಲಾಸ್!

ಮಲೆಯಾಳಂ ಸಿನಿ ಜಗತ್ತು ಈಗ ಮೀಟು ಪ್ರಕರಣಗಳಿಂದ ಬೆಂಕಿ ಜ್ವಾಲೆಯಾಗಿ ಧಗ ಧಗ ಅಂತ ಉರಿಯುತ್ತಿದೆ. ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸಿ ನಿಂತಿದೆ. 

First Published Sep 3, 2024, 11:15 AM IST | Last Updated Sep 3, 2024, 11:15 AM IST

ಸೂಪರ್​ ಸ್ಟಾರ್​ ರಜನಿಕಾಂತ್ ಯಾರ ತಂಟೆಗೂ ಹೋದವರಲ್ಲ. ರಜನಿಕಾಂತ್​ರ ಇಷ್ಟು ದಿನದ ಸಿನಿ ಖರಿಯರ್​​ನಲ್ಲಿ ವಿವಾದಗಳಿಂದ ಮೈಲು ದೂರ ಇದ್ದವರು. ಆದ್ರೆ ಈಗ ಸೂಪರ್​​ ಸ್ಟಾರ್​ಗೂ ತಲೆ ಕೆಡಿಸುತ್ತಿದೆ ಮಲೆಯಾಳಂ ಸಿನಿ ಜಗತ್ತಿನ ಕರಾಳ ಕತೆಗಳು.. ಹಾಗಾದ್ರೆ ತಲೈವಾಗೂ ಮಲೆಯಾಳಂ ಸಿನಿ ಇಂಡಸ್ಟ್ರಿಯ ವಿವಾದಕ್ಕೂ ಏನು ಸಂಬಂಧ..? ರಜನಿಗ್ಯಾಕೆ ಮಲೆಯಾಳಂ ಚಿತ್ರರಂಗದ ಟೆನ್ಷನ್..? ಇಲ್ಲಿದೆ ನೋಡಿ ಫುಲ್​ ಡಿಟೈಲ್ಸ್. ಸೂಪರ್ ಸ್ಟಾರ್​ ರಜನಿಕಾಂತ್.. ತಮಿಳು ಸಿನಿ ಜಗತ್ತಿನ ಸೂಪರ್​ ಮ್ಯಾನ್​.. ರಜನಿಕಾಂತ್ ಅನ್ನೋ ಹೆಸರು ಕೇಳಿದ್ರೆ ಸಾಕು. ದೇವರಂತೆ ಕಾಣೋ ಕೊಟ್ಯಾಟು ಕೋಟಿ ಅಭಿಮಾನಿ ಬಳಗ ಇದೆ. ತಲೈವಾ ಬಂದ್ರೆ ಸಾಕು ಕೈ ಮುಗಿದು ನಿಲ್ಲೋ ಅದೆಷ್ಟೋ ಜನರಿದ್ದಾರೆ. ರಜನಿಕಾಂತ್ ಹೆಸರಿಗೆ ಘನತೆ ಗೌರವ ಇದೆ. ಇದಕ್ಕೆಲ್ಲಾ ಕಾರಣ ರಜನಿಕಾಂತ್​ ವಿವಾದಗಳಿಂದ ಮೈಲು ದೂರ ಇದ್ದು, ತಮ್ಮ ಹೆಸರನ್ನ ಹಚ್ಚ ಹಸಿರಾಗಿಯೇ ಉಳಿಸಿಕೊಂಡು ಬಂದವರು. 

ಮಲೆಯಾಳಂ ಸಿನಿ ಜಗತ್ತು ಈಗ ಮೀಟು ಪ್ರಕರಣಗಳಿಂದ ಬೆಂಕಿ ಜ್ವಾಲೆಯಾಗಿ ಧಗ ಧಗ ಅಂತ ಉರಿಯುತ್ತಿದೆ. ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಬಹಿರಂಗಗೊಂಡ ಬಳಿಕ ಮಲಯಾಳಂ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸಿ ನಿಂತಿದೆ. ಮಾಲಿವುಡ್​​ನಲ್ಲಿ ಮಹಿಳೆಯರಿಗೆ ಸೇಫ್ಟಿ ಇಲ್ಲ. ಲೈಂಗಿಕ ಕಿರುಕುಳ ಹೆಚ್ಚಾಗಿದೆ. ಅವಕಾಶ ಕೊಟ್ಟು ಪಲ್ಲಂಗಕ್ಕೆ ಏರೋ ಜನ ಹೆಚ್ಚಾಗಿರೋ ಪ್ರಕರಣಗಳು ಬೆಳಕಿಗೆ ಬಂದಾಗಿದೆ. ಇದಕ್ಕಾಗಿ ಮಲೆಯಾಳಂ ಸಿನಿ ಇಂಡಸ್ಟ್ರಿಯನ್ನ ಹೀಲ್ಡ್​​ನಲ್ಲಿ ಇಟ್ಟುಕೊಂಡಿದ್ದ ಕೆಲವರ ತಲೆದಂಡ ಕೂಡ ಆಗಿದೆ. ಈಗ ಸೂಪರ್​​ ಸ್ಟಾರ್​ ರಜನಿಕಾಂತ್​ಗೆ ಮಾಲಿವುಡ್​​ ಜಗತ್ತಿನ ಟಾರ್ಚರ್​ ಶುರುವಾಗಿದೆ. ಹೇಮಾ ವರದಿ ಮಲೆಯಾಳಂನ ಕರಾಳ ಕತೆಗಳನ್ನ ಬಿಚ್ಚಿಟ್ಟಿದ್ದೇ ತಡ. ತೆಲುಗು, ತಮಿಳು ಸಿನಿಮಾ ರಂಗ ಫುಲ್ ಅಲರ್ಟ್ ಆಗಿದೆ. 

ಆದ್ರೆ ಸೂಪರ್ ಸ್ಟಾರ್ ರಜನಿಕಾಂತ್​ ಮಾತ್ರ ಗ್ರೇಟ್ ಎಸ್ಕೇಪ್​ ರೀತಿ ಮಾತನಾಡಿದ್ದಾರೆ. ರಜನಿಕಾಂತ್ಗೆ ಹೇಮಾ ಕಮಿಟಿ ವರದಿ ಕೇಳಿದ್ದಕ್ಕೆ ನಗೇನು ಗೊತ್ತಿಲ್ಲ ಎಂದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ರಜನಿಕಾಂತ್ ವಿರುದ್ಧ ತಿರುಗಿಬಿದ್ದಿದ್ದಾರೆ. ಮಲಯಾಳಂ ಚಿತ್ರರಂಗವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುವ ಸಂಗತಿ ಗೊತ್ತಿಲ್ಲವೇ? ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ವಿಷಯ ರಜನಿಕಾಂತ್ಗೆ ಗೊತ್ತಿಲ್ಲವಾ ಅಂತ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮಾಲಿವುಡ್​​ನ ಖ್ಯಾತ ನಟ ಮೋಹನ್​​ಲಾಲ್​ ಕೂಡ ತಮ್ಮ ಚಿತ್ರರಂಗದಲ್ಲಾಗುತ್ತಿರೋ ಕಾಮಕಾಂಡದ ಬಗ್ಗೆ ಮಾತನಾಡಿದ್ರು. ಸೂಕ್ತ ದಾಖಲೆ ಇದ್ರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದಿದ್ರು. ಆ ಕಡೆ ನಟಿ ಸಮಂತಾ ಕೂಡ ಈ ಗುಡುಗಿದ್ರು. ಟಾಲಿವುಡ್​​ ಚಿತ್ರರಂಗದಲ್ಲೂ ಇದೇ ರೀತಿ ವರದಿ ಬೇಕೆಂದು ತೆಲಂಗಾಣ ಸರ್ಕಾರಕ್ಕೆ ನಟಿ ಸಮಂತಾ ಆಗ್ರಹಿಸಿದ್ರು. ಆದ್ರೆ ತಲೈವಾ ಮಾತ್ರ ನನಗೇನು ಗೊತ್ತಿಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಇದಕ್ಕೀಗ ರಜನಿ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಫುಲ್ ಕ್ಲಾಸ್​ ತೆಗೆದುಕೊಳ್ಳಲಾಗ್ತಿದೆ. 

Video Top Stories