70ನೇ ವಯಸ್ಸಲ್ಲಿ ಸ್ಕೂಲಿಗೆ ಹೋದ್ರಾ ಸೂಪರ್​ಸ್ಟಾರ್?: ಮೊಮ್ಮಗನ ಜೊತೆ ಸ್ಕೂಲಿಗೆ ಹೋದ ರಜನಿಕಾಂತ್

ಸ್ಕೂಲಿಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದ ಮೊಮ್ಮಗನನ್ನು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಹೇಗೇ ಕಳುಹಿಸಿದರು ಗೊತ್ತಾ? ಈ ಕುರಿತ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 
 

First Published Jul 28, 2024, 11:51 AM IST | Last Updated Jul 29, 2024, 11:24 AM IST

ಸ್ಕೂಲಿಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದ ಮೊಮ್ಮಗನನ್ನು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಹೇಗೇ ಕಳುಹಿಸಿದರು ಗೊತ್ತಾ? ಈ ಕುರಿತ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಕೂಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿರುವಾಗಲೇ ಕ್ಯಾಬ್‌ನಲ್ಲಿ ಶಾಲೆಗೆ ಹೋಗಲು ಕಷ್ಟಪಡುತ್ತಿದ್ದ ಮೊಮ್ಮಗನಿಗಾಗಿ ರಜನಿಕಾಂತ್ ಮಾಡಿದ ಕೆಲಸ ನೆಟ್ಟಿಗರ ಹೃದಯ ಗೆದ್ದಿದೆ. ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ರಜನಿಕಾಂತ್, ಅವರ ಮಗ ವೀರ್. ಮೊಮ್ಮಗ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಂತಿದ್ದ, ಈ ವೇಳೆ ರಜನಿಕಾಂತ್ ಅವರು ಮೊಮ್ಮಗನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ನೇರವಾಗಿ ಕ್ಲಾಸ್‌ ರೂಮ್‌ಗೆ ಬಿಟ್ಟು ಬಂದಿದ್ದಾರೆ. ಇನ್ನು ಶಾಲೆಯಲ್ಲಿ ತಲೈವಾ ರಜನಿಕಾಂತ್ ಅವರನ್ನು ನೋಡಿದ ವಿದ್ಯಾರ್ಥಿಗಳು ಆಶ್ಚರ್ಯಪಟ್ಟಿದ್ದಾರೆ. ಈ  ಬಗ್ಗೆ ಸೌಂದರ್ಯ ರಜನಿಕಾಂತ್ ಅವರು ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ, ಮೊಮ್ಮಗನೊಂದಿಗೆ ಕಾರಿನಲ್ಲಿ ರಜನಿಕಾಂತ್ ಇರುವ ಫೋಟೋ ಮತ್ತು ರಜನಿಕಾಂತ್‌ ನೋಡಿ ಶಾಲೆಯಲ್ಲಿ ಮಕ್ಕಳ ಪ್ರತಿಕ್ರಿಯೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.