Asianet Suvarna News Asianet Suvarna News

RRR Release: ಹೊಸ ರಿಲೀಸ್​ ದಿನಾಂಕ ಘೋಷಣೆ ಮಾಡಿದ ರಾಜಮೌಳಿ

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಜ್ಯೂ.ಎನ್​ಟಿಆರ್ ಮತ್ತು ರಾಮ್​ ಚರಣ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (ರೌದ್ರ-ರಣ-ರುಧಿರ) ರಿಲೀಸ್‌ಗೆ ಹೊಸ ಡೇಟ್‌ ಫಿಕ್ಸ್‌ ಆಗಿದೆ. ಈ ವರ್ಷದ ಆರಂಭದಲ್ಲಿಯೇ ಈ ಸಿನಿಮಾ ತೆರೆಗೆ ಬರಬೇಕಿತ್ತು.

First Published Feb 2, 2022, 12:43 PM IST | Last Updated Feb 2, 2022, 1:00 PM IST

ಎಸ್‌.ಎಸ್‌.ರಾಜಮೌಳಿ (SS Rajamouli) ನಿರ್ದೇಶನದ ಜ್ಯೂ.ಎನ್​ಟಿಆರ್ (Jr.NTR) ಮತ್ತು ರಾಮ್​ ಚರಣ್ (Ram Charan)​ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್‌' (RRR) (ರೌದ್ರ-ರಣ-ರುಧಿರ) ರಿಲೀಸ್‌ಗೆ ಹೊಸ ಡೇಟ್‌ ಫಿಕ್ಸ್‌ ಆಗಿದೆ. ಈ ವರ್ಷದ ಆರಂಭದಲ್ಲಿಯೇ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಹಾವಳಿ ಹೆಚ್ಚಿದ್ದರಿಂದ ರಿಲೀಸ್​ ಡೇಟ್​ ಮುಂದೂಡಲ್ಪಟ್ಟಿತು. ಮಾರ್ಚ್ 18ರಿಂದ ಏಪ್ರಿಲ್ 28ರೊಳಗೆ ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದ ಚಿತ್ರತಂಡ ಕೊನೆಗೂ ಎಲ್ಲಾ ಅಡೆತಡೆಗಳನ್ನು ಮೀರಿ ಮಾರ್ಚ್ 25ರಂದು ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

RRR Movie: ಹಾಡಿನ ಮೂಲಕ ರಾಮ್ ಚರಣ್ ಪವರ್‌ಫುಲ್ ಕ್ಯಾರೆಕ್ಟರ್ ರಿವೀಲ್!

ಇನ್ನು ಮಾರ್ಚ್​​ 18ರಂದು 'ಆರ್‌ಆರ್‌ಆರ್‌' ಸಿನಿಮಾ ರಿಲೀಸ್ ಮಾಡುವ ಆಯ್ಕೆಯನ್ನು ಚಿತ್ರತಂಡ ಇಟ್ಟುಕೊಂಡಿತ್ತು. ಆದರೆ ಪುನೀತ್​ ರಾಜ್​ಕುಮಾರ್ (Puneeeth Rajkumar)​ ನಟನೆಯ 'ಜೇಮ್ಸ್​' (James) ಸಿನಿಮಾ ಮಾ.17ರಂದು ಬಿಡುಗಡೆ ಆಗಬಹುದು ಎಂದು ನಿರೀಕ್ಷಿಸಲಾಗಿದ್ದರಿಂದ ಮಾರ್ಚ್ 25ರಂದು ಚಿತ್ರ ಬಿಡುಗಡೆ ಮಾಡುವುದಾಗಿ 'ಆರ್‌ಆರ್‌ಆರ್‌' ಚಿತ್ರತಂಡ ತಿಳಿಸಿದೆ. ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಬಿಗ್‌ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories