Asianet Suvarna News Asianet Suvarna News

ಆಸ್ಕರ್‌ಗಾಗಿ ಇಷ್ಟೊಂದು ಹಣ ಖರ್ಚು ಮಾಡಿದ್ರಾ ರಾಜಮೌಳಿ, ಗೆದ್ದರೆ ಎಷ್ಟು ಸಿಗುತ್ತೆ?

ಆಸ್ಕರ್‌ಗಾಗಿ ರಾಜಮೌಳಿ ಕೋಟಿ ಕೋಟಿ ಹಣ ಖರ್ಚು ಮಾಡಿದೆ. ಇದುವರೆಗೂ ರಾಜಮೌಳಿ ಪ್ರತಿಷ್ಠಿತ ಆಸ್ಕರ್‌ಗಾಗಿ 80 ಕೋಟಿ ಖರ್ಚು ಮಾಡಿದೆ ಎನ್ನಲಾಗಿದೆ. 

First Published Mar 11, 2023, 3:42 PM IST | Last Updated Mar 11, 2023, 3:42 PM IST

ಇಂಡಿಯನ್ ಸಿನಿಮಾ ಜಗತ್ತು ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ಳೋ ಟೈಂ ಬಂದಿದೆ. ಚಿತ್ರರಂಗದ ಜಕ್ಕಣ್ಣ ಎಸ್ ಎಸ್ ರಾಜಮೌಳಿ RRR ಸಿನಿಮಾ ಆಸ್ಕರ್ ಗೆ ಆಯ್ಕೆ ಆಗುವಂತೆ ಮಾಡಿದ್ದಾರೆ. ಈ ಬಾರಿ ಆಸ್ಕರ್ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಅನ್ನೋ ದೊಡ್ಡ ವಿಶ್ವಾಸ ಭಾರತೀಯರಲ್ಲಿದೆ. RRR ಸಿನಿಮಾ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇರೋ ಎಲ್ಲಾ ಪರೀಕ್ಷೆಗಳನ್ನ ಮುಗಿಸಿದೆ. ಮಾರ್ಚ್ 12ಕ್ಕೆ ಅಮೇರಿಕಾದಲ್ಲಿ ಆಸ್ಕರ್ ಘೋಷಣೆ ಆಗುತ್ತೆ. ಅಂದು ವೇದಿಕೆ ಮೇಲೆ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿನ ಲೈವ್ ಪರ್ಫಾಮ್ ನಡೆಯಲಿದೆ. ಆದ್ರೆ RRR ಸಿನಿಮಾ ಆಸ್ಕರ್ ಪ್ರಶಸ್ತಿ ರೌಂಡ್ಗೆ ಹೋಗಲು ನಿರ್ದೇಶಕ ಎಸ್ಎಸ್ ರಾಜಮೌಳಿ ಬರೋಬ್ಬರಿ 80 ಕೋಟಿ ಖರ್ಚು ಮಾಡಿದ್ದಾರೆ ಅನ್ನೋ ಸುದ್ದಿ ಹೊರ ಬಂದಿದೆ.  ಆಸ್ಕರ್ ಗೆಲ್ಲಲು 80 ಕೋಟಿಯನ್ನ ಮೌಳಿ ಖರ್ಚು ಮಾಡಿದ್ರು ಅನ್ನೋದು ಈಗ ದೊಡ್ಡ ವಿಷಯ. ಹಾಗಾದ್ರೆ ಆಸ್ಕರ್ ಗೆದ್ರೆ ಎಷ್ಟು ದುಡ್ಡು ಸಿಗುತ್ತೆ. ಆಸ್ಕರ್ ಪ್ರಶಸ್ತಿ ಮೌಲ್ಯ ಎಷ್ಟು ಅನ್ನೋ ಪ್ರಶ್ನೆಯೂ ಹುಟ್ಟುತ್ತೆ. ಆಸ್ಕರ್ ಗೆದ್ದವರಿಗೆ ಪ್ರಶಸ್ತಿ ಬಿಟ್ರೆ ಮತ್ತಿನ್ನೇನು ಸಿಗಲ್ಲ. 13.5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿಯನ್ನ ಆಸ್ಕರ್ ಪ್ರಶಸ್ತಿಯಾಗಿ ಕೊಡ್ತಾರೆ. ಅಮೇರಿಕಾದಲ್ಲಿ ಸಿದ್ಧವಾಗೋ ಈ ಪ್ರಶಸ್ತಿಗೆ ಬರೀ ಒಂದು ಡಾಲರ್ ಅಂದ್ರೆ ಭಾರತೀಯ ಮೌಲ್ಯದಲ್ಲಿ 82 ರೂಪಾಯಿ ಮಾತ್ರ. ಆದ್ರೆ ಈ ಪ್ರಶಸ್ತಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ಇದೆ.