RRR: ಬಾಹುಬಲಿ​-2ಗಿಂತ ಡಬಲ್‌ ಬಜೆಟ್‌, ರೆಕಾರ್ಡ್ ಬುಕ್ ಸೇರಿದ 'ಆರ್‌ಆರ್‌ಆರ್‌’..!

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮಾ.25 ರಂದು ಬಿಡುಗಡೆಗೆ ಸಿದ್ಧವಾಗಿರುವ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’(RRR) ಚಿತ್ರದ ಒಟ್ಟಾರೆ ಬಜೆಟ್‌ 500 ಕೋಟಿ ರು. ದಾಟಿದೆ ಎನ್ನಲಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 23): ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮಾ.25 ರಂದು ಬಿಡುಗಡೆಗೆ ಸಿದ್ಧವಾಗಿರುವ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’(RRR) ಚಿತ್ರದ ಒಟ್ಟಾರೆ ಬಜೆಟ್‌ 500 ಕೋಟಿ ರು. ದಾಟಿದೆ ಎನ್ನಲಾಗುತ್ತಿದೆ. ಇದು ನಿಜವಾದಲ್ಲಿ ಇದು, ಇದುವರೆಗೆ ಭಾರತದಲ್ಲಿ ನಿರ್ಮಾಣವಾದ ಅತ್ಯಂತ ಹೆಚ್ಚಿನ ಬಜೆಟ್‌ನ (High Budget Movie) ಸಿನೆಮಾ ಎನ್ನಿಸಿಕೊಳ್ಳಲಿದೆ.

ರಾಜಮೌಳಿ (SS rajamouli) ಅವರದ್ದೇ ಆದ ಬಹುಜನಪ್ರಿಯ ‘ಬಾಹುಬಲಿ’(Bahubali) 180 ಕೋಟಿ ರು.ನಲ್ಲಿ ಹಾಗೂ ಮುಂದುವರೆದ 2ನೇ ಭಾಗವಾದ ‘ಬಾಹುಬಲಿ: ದ ಕನ್‌ಕ್ಲೂಷನ್‌’ ಅನ್ನು 250 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದೇ ಇದುವರೆಗಿನ ಅತಿ ದುಬಾರಿ ವೆಚ್ಚದ ಚಿತ್ರ ಎನ್ನಿಸಿಕೊಂಡಿತ್ತು. ಇದನ್ನು ಆರ್‌ಆರ್‌ಆರ್‌ ಮೀರಿಸುವ ಸಾಧ್ಯತೆ ಇದೆ.

ಚಿತ್ರದಲ್ಲಿ ರಾಮ್‌ಚರಣ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರೂ ಚಿತ್ರಕ್ಕೆ ತಲಾ 45 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ಈ ಹಿಂದೆ ವರದಿಗಳು ಹೇಳಿದ್ದವು. ಇನ್ನು ಅಜಯ್‌ ದೇವಗನ್‌ ಮತ್ತು ಅಲಿಯಾ ಭಟ್‌ ಕೂಡಾ ಚಿತ್ರದಲ್ಲಿ ನಟಿಸಿದ್ದು, ಅವರಿಗೆ ಕ್ರಮವಾಗಿ 25 ಮತ್ತು 9 ಕೋಟಿ ರು. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ಇದಕ್ಕೆ ಇತರೆ ನಟರು, ಸಿಬ್ಬಂದಿ ಸಂಭಾವನೆ ಮತ್ತು ಜಿಎಸ್‌ಟಿಯೂ ಸೇರಿದರೆ ಅದು ಹೆಚ್ಚು ಕಡಿಮೆ 500 ಕೋಟಿ ರು. ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

Related Video