ಸೌತ್ ಸಿನಿಮಾ ಕನಸಿನ ಕನ್ಯೆ ಶ್ರೀಲೀಲಾ ಕಮಾಲ್, ಬಾಲಿವುಡ್‌ನಲ್ಲಿ ಬೈ ಟು ಲವ್ ಶುರು?

ಸೌಂದರ್ಯದ ಗಣಿ ಆಗಿರೋ ಶ್ರೀಲೀಲಾ ತೆಲುಗು ಚಿತ್ರರಂಗದ ತುಂಬೆಲ್ಲಾ ತನ್ನ ಅಂದ ಚಂದವನ್ನ ತೆರೆದಿಟ್ಟಿದ್ದಾಯ್ತು. ಪ್ರಿನ್ಸ್ ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣರಂತಹ ಸ್ಟಾರ್‌ಗಳ ಜೊತೆ ಸ್ಕ್ರೀನ್‌ ಶೇರ್ ಮಾಡಿರೋ ಈ ಬೇಬಿ 'ಪುಷ್ಪ'-2 ಸ್ಪೆಷಲ್ ಸಾಂಗ್ ನಲ್ಲಿ ಮತ್ತೇರಿಸಿ ಕಿಸಿಕ್ ಅಂದಿದ್ರು. ಈಗ..

First Published Jan 5, 2025, 12:45 PM IST | Last Updated Jan 5, 2025, 12:45 PM IST

ಎಲ್ಲೆಲ್ಲೂ ಇವಳದ್ದೇ ಜಪ ತಪ.. ಟ್ರೆಂಡು ಬ್ಯಾಂಡು.. ಇವಳು ಕಾಲು ಇಟ್ಟಲ್ಲೆಲ್ಲಾ ಫೋಟೋ ಬೇಕು ಅಂತ ಫಾಲೋವರ್ಸ್​ದು ಒಂದೇ ಡಿಮ್ಯಾಂಡು.. ಯೆಸ್, ಬೆಳ್ಳಿತೆರೆ ಮೇಲೆ ಕಿಸ್​ ಕಿಸ್​ ಕಿಸಕ್ಕ ಎನ್ನುತ್ತಿರೋ ಶ್ರೀಲೀಲಾ (Sreeleela) ಆಂಧ್ರ, ತೆಲಂಗಾಣದಲ್ಲಿ ಹಾವ ಎಬ್ಬಿಸಿ ಬಿಟ್ಟಿದ್ದಾಳೆ. ಟಾಪ್​ ಹೀರೋಗಳನ್ನ ನೋಡೋಕೆ ಮುಗಿ ಬೀಳೋ ಹಾಗೆ ಶ್ರೀಲೀಲಾಗೆ ಹಪಹಪಿಸುವ ಲಕ್ಷಾಂತರ ಗಂಡ್​​ ಹೈಳ್ಳ ಹಬ್ ಇದೆ. 

ಕನ್ನಡತಿ ಶ್ರೀಲೀಲಾ ಟಾಲಿವುಡ್​ಅನ್ನ ಆವರಿಸಿಕೊಂಡಿದ್ದಾರೆ. ಟಾಲಿವುಡ್​ಗೆ ಕಾಲಿಟ್ಟು ಎರಡೇ ವರ್ಷದಲ್ಲಿ ಅಂದ ಚಂದದ ಶ್ರೀಲೀಲಾಳ ಲೀಲಾವಳಿ ನೋಡಿ ಸಿನಿ ಮಂದಿ ಅಬ್ಬಬ್ಬಾ ಎನ್ನುತ್ತಿದ್ದಾರೆ. ಇದೇ ಟೈಮ್​ನಲ್ಲಿ ಈ ಗುಂಟೂರು ಖಾರಂ ಚೆಲುವೆ ಮುಂಬೈನಲ್ಲಿ ಧಮಾಕ ಎಬ್ಬಿಸೋಕೆ ಹೊರಟು ನಿಂತಿದ್ದಾರೆ. ಬಾಲಿವುಡ್​ ಹೀರೋ ಜೊತೆ ಶ್ರೀಲೀಲಾ ಬೈಟು ಲವ್ ಸ್ಟೋರಿಯೊಂದು ಸೃಷ್ಟಿಯಾಗಿದೆ..

ಸೌಂದರ್ಯದ ಗಣಿ ಆಗಿರೋ ಶ್ರೀಲೀಲಾ ತೆಲುಗು ಚಿತ್ರರಂಗದ ತುಂಬೆಲ್ಲಾ ತನ್ನ ಅಂದ ಚಂದವನ್ನ ತೆರೆದಿಟ್ಟಿದ್ದಾಯ್ತು. ಪ್ರಿನ್ಸ್ ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಕೃಷ್ಣರಂತಹ ಸ್ಟಾರ್‌ಗಳ ಜೊತೆ ಸ್ಕ್ರೀನ್‌ ಶೇರ್ ಮಾಡಿರೋ ಈ ಬೇಬಿ 'ಪುಷ್ಪ'-2 ಸ್ಪೆಷಲ್ ಸಾಂಗ್ ನಲ್ಲಿ ಮತ್ತೇರಿಸಿ ಕಿಸಿಕ್ ಅಂದಿದ್ರು. ಈಗ ಶ್ರೀಲೀಲಾ ಹೈದರಾಬಾದ್​ ಟು ಮುಂಬೈ ಅಂತ ಫ್ಲೈಟ್ ಹತ್ತಿ ಸುತ್ತುತ್ತಿದ್ದಾರೆ. ಅದಕ್ಕೆ ಕಾರಣ ಬಾಲಿವುಡ್​​ನ ಟಾಪ್​ ಪ್ರೊಡ್ಯೂಸರ್ ಕರಣ್ ಜೋಹರ್​.. 

ಕಿಸ್​ ಕಿಸ್ ಕಿಸಕ್ಕ ಶ್ರೀಲೀಲಾ ಈಗ ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಚಿತ್ರದಲ್ಲಿ ನಟಿಸ್ತಾರೆ. ಕರಣ್​ ಜೋಹರ್​ ಸಿನಿಮಾ ಅಂದ್ರೆ ಪೇಮೆಂಟ್ ಕೊಡದೇ ಇದ್ರೂ ಪರವಾಗಿಲ್ಲ ಚಾನ್ಸ್ ಸಿಕ್ರೆ ಸಾಕು ಅಂತ ಕಾಯೋ ಹೀರೋಯಿನ್ಸ್ ಇದ್ದಾರೆ. ಅಂತವರ ಮಧ್ಯೆ ಈಗ ಶ್ರೀಲೀಲಾ ಕರಣ್ ಜೋಹರ್​​ ಫಿಲ್ಮ್ ಫ್ಯಾಕ್ಟರಿಗೆ ಎಂಟ್ರಿ ಕೊಟ್ಟಿದ್ದಾರೆ. 

ಕರಣ್ ಜೋಹರ್​ ಪ್ರೊಡಕ್ಷನ್​​ನಲ್ಲಿ ಪ್ಯೂರ್ ಲವ್ ಸ್ಟೋರಿಯೊಂದು ಸಿದ್ಧವಾಗುತ್ತಿದ್ದು, ಆ ಸಿನಿಮಾದಲ್ಲಿ ಬಿಟೌನ್​ನ  ಸ್ಟಾರ್ ಹೀರೋ ಕಾರ್ತಿಕ್ ಆರ್ಯನ್ ಜೊತೆ ಪ್ರೀತಿಯ ಅಂಬಾರಿ ಹೊತ್ತು ಶ್ರೀಲೀಲಾ ತೆರೆ ಮೇಲೆ ಬರುತ್ತಾರೆ ಅಂತ ಹೇಳಲಾಗ್ತಿದೆ. ಶ್ರೀಲೀಲಾ ಸೊಬಗಿನ ಸೌಂದರ್ಯಕ್ಕೆ ಬಿಟೌನ್ ಮರುಳಾಗಿರೋದಂತು ನಿಜ.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Video Top Stories