
ಪುಷ್ಪ-2 ಕಾಲ್ತುಳಿತ, ಬದುಕುಳಿದ ಬಾಲಕನ ಆರ್ತನಾದ:‘ಅಮ್ಮ ಎಲ್ಲಿ..?’ ಅಲ್ಲು ಅಭಿಮಾನಿಯ ಪ್ರಶ್ನೆಗೆ ಉತ್ತರವೆಲ್ಲಿ?
ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ನಡೆದ ಕಾಲ್ತುಳಿತ.. ಆ ಬಳಿಕ ನಡೆದ ಹೈಡ್ರಾಮಾ ಎಲ್ಲವೂ ಗೊತ್ತೇ ಇದೆ. ಆ ಕಾಲ್ತುಳಿತದಲ್ಲಿ ಸಿಲುಕಿ 5 ತಿಂಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆಗೂ ಮೃತ್ಯು ಜಯಿಸಿದ್ದಾನೆ.
ಪುಷ್ಪ-2 ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ನಡೆದ ಕಾಲ್ತುಳಿತ.. ಆ ಬಳಿಕ ನಡೆದ ಹೈಡ್ರಾಮಾ ಎಲ್ಲವೂ ಗೊತ್ತೇ ಇದೆ. ಆ ಕಾಲ್ತುಳಿತದಲ್ಲಿ ಸಿಲುಕಿ 5 ತಿಂಗಳ ಕಾಲ ಕೋಮಾದಲ್ಲಿದ್ದ ಬಾಲಕ ಕೊನೆಗೂ ಮೃತ್ಯು ಜಯಿಸಿದ್ದಾನೆ. ಆದ್ರೆ ಬದುಕುಳಿದ ಅಲ್ಲು ಅಭಿಮಾನಿಯ ಆರ್ತನಾದ ಕೇಳಿದ್ರೆ ಎಂಥವರಿಗೂ ಕಣ್ತುಂಬಿ ಬರುತ್ತೆ. ಪುಷ್ಪ-2.. ಭಾರತೀಯ ಸಿನಿರಂಗದಲ್ಲಿ ಹೊಸ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಆದ್ರೆ ಇಂಥಾ ಪುಷ್ಪ-2 ಬಿಡುಗಡೆ ಸಮಯದಲ್ಲಿ ಆದ ದುರಂತ, ಅದರ ಸಕ್ಸಸ್ ಸಂಭ್ರಮವನ್ನೆಲ್ಲಾ ಮರೆಸುವಂತೆ ಮಾಡಿಬಿಟ್ಟಿತ್ತು.
ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಅನ್ನೋ ಮಹಿಳೆ ಸಾವನ್ನಪ್ಪಿದ್ರು. ಆಕೆಯ 9 ವರ್ಷದ ಮಗ ಶ್ರೀತೇಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಈ ದುರ್ಘಟನೆಗೆ ಅಲ್ಲು ಅರ್ಜುನ್ ಬೇಜವಾಬ್ದಾರಿಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದ ತೆಲಂಗಾಣ ಸಿಎಂ, ಇಡೀ ತೆಲುಗು ಚಿತ್ರೋದ್ಯಮಕ್ಕೆ ವಾರ್ನ್ ಮಾಡಿದ್ರು. ಈ ಕೇಸ್ನಲ್ಲಿ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಒಂದು ದಿನ ಜೈಲು ಕೂಡ ನೋಡಿ ಬಂದ್ರು. ಈಗಲೂ ಈ ಕೇಸ್ ನಡೀತಾ ಇದೆ. ಇನ್ನೂ ಸಮಾಧಾನದ ವಿಚಾರ ಅಂದ್ರೆ ಗಂಭೀರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದ ಬಾಲಕ ಶ್ರೀತೇಜ್ ಕೊನೆಗೂ ಮೃತ್ಯವನ್ನ ಗೆದ್ದಿದ್ದಾರೆ. 4 ತಿಂಗಳು 25 ದಿನಗಳ ಬಳಿಕ ಬಾಲಕ ಶ್ರೀತೇಜ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಆದ್ರೆ ಈ ಮೃತ್ಯ ಗೆದ್ದ ಬಾಲಕ ಕೇಳುತ್ತಿರೋ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ತಾ ಇಲ್ಲ. ಹೌದು ಶ್ರೀತೇಜ್ಗೆ ಆ ದಿನ ಸಿನಿಮಾ ನೋಡಲಿಕ್ಕೆ ತಾಯಿಯ ಜೊತೆಗೆ ಹೋಗಿದ್ದು, ನೂಕು ನುಗ್ಗಲು ಸಂಭವಿಸಿದ್ದು ಎಲ್ಲವೂ ನೆನಪಿದೆ. ಮುಂದೇನಾಯ್ತು ಅನ್ನೋದು ಗೊತ್ತಿಲ್ಲ. ಈ ಬಾಲಕ ತನ್ನ ತಾಯಿ ಎಲ್ಲಿ ಅನ್ನೋ ಪ್ರಶ್ನೆ ಕೇಳ್ತಾ ಇದ್ದಾನೆ. ಆದ್ರೆ ಈತನ ತಾಯಿ ಅದೇ ದಿನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ರು ಅನ್ನೋ ವಿಚಾರ ಈ ಮುಗ್ದ ಬಾಲಕನಿಗೆ ಗೊತ್ತಿಲ್ಲ. ಈಗಾಗ್ಲೇ ಪುಷ್ಪ-2 ತಂಡ ಮತ್ತು ಅಲ್ಲು ಅರ್ಜುನ್ ಬಾಲಕನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಆಸ್ಪತ್ರೆಯ ವೆಚ್ಚಗಳನ್ನ ಕೂಡ ಸರ್ಕಾರ ಭರಿಸಿದೆ. ಅಂತೂ ಇಂತೂ ಬಾಲಕನ ಜೀವ ಉಳಿದಿದೆ. ಆದ್ರೆ ಈ ಅಭಿಮಾನಿಯ ಪ್ರಶ್ನೆಗಳಿಗೆ ಖುದ್ದು ಪುಷ್ಪನ ಬಳಿಯೂ ಉತ್ತರ ಇಲ್ಲ..!