
ಪುಷ್ಪ 2: ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ! ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆ ಫುಲ್ ಫ್ಲವರ್.. ಫೈಯರ್!
ರಿಲೀಸ್ ಆಗಿ ಆರೇ ದಿನಗಳಲ್ಲಿ 'ಪುಷ್ಪ 2' ಸಿನಿಮಾ ಬರೋಬ್ಬರಿ ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರತಂಡವು ಈ ಯಶಸ್ಸಿಗೆ ಭಾರತೀಯ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದೆ.
ರಿಲೀಸ್ ಆಗಿ ಆರೇ ದಿನಗಳಲ್ಲಿ ಬರೋಬ್ಬರಿ ಸಾವಿರ ಕೋಟಿ ಕಲೆಕ್ಷನ್. ಕಲೆಕ್ಷನ್ನಲ್ಲಿ ಪುಷ್ಪ 2 ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ದಾಖಲೆ ಮಾಡಿದೆ. ಈ ಹಿಂದೆ ಯಾವ ಸಿನಿಮಾ ಕೂಡ ಈ ದಾಖಲೆ ಮಾಡಿರಲಿಲ್ಲ. ವಿಶ್ವದಾದ್ಯಂತ ಪುಷ್ಪ 2 ಸಿನಿಮಾವನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ. ಹಾಡಿ ಕೊಂಡಾಡಿದ್ದಾನೆ.
ಪುಷ್ಪ 2 ಸಿನಿಮಾ ರಿಲೀಸ್ ಆಗಿ ಒಂದು ವಾರಕ್ಕೂ ಮೊದಲೇ ಸಾವಿರ ಕೋಟಿ ಕಲೆಕ್ಷನ್ ಮಾಡಿದೆ. ಪುಷ್ಪ ತಂಡ ಸಖತ್ ಖುಷಿಯಲ್ಲಿದೆ. ಆದ್ರೆ ಈ ಖುಷಿಯನ್ನು ಆ ತಂಡವೊಂದೇ ಹಂಚಿಕೊಳ್ಳುತ್ತಿಲ್ಲ ಬದಲಾಗಿದೆ. ನಿನ್ನೆ ದೆಹಲಿಯಲ್ಲಿ ಥ್ಯಾಂಕ್ಯೂ ಇಂಡಿಯಾ ಹೆಸರಿನಲ್ಲಿ ಪ್ರೆಸ್ ಮೀಟ್ ಮಾಡಿ. ಭಾರತ ದೇಶವಾಸಿಗಳಿಗೆ ಧನ್ಯವಾದ ತಿಳಿಸಿದೆ.
ಹಾಗೆನೇ ಮುಂದಿನ ದಿನಗಳಲ್ಲಿ ಒಳ್ಳೇ ಚಿತ್ರಗಳ ನಿರ್ಮಾಣಕ್ಕೆ ಇದು ಬಹುದೊಡ್ಡ ಬುನಾದಿ ಹಾಕಿದೆ ಎಂದೇ ಹೇಳಬಹುದು.
ಪುಷ್ಪ 2 ಸಕ್ಸಸ್ ಜೊತೆಗೆ ಪುಷ್ಟ ಚಿತ್ರದಲ್ಲಿ ನಟಿಸಿದ ನಟರಿಗೆ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆಯಂತೆ. ಒಟ್ಟಿನಲ್ಲಿ ಪುಷ್ಪ 2 ಚಿತ್ರದ ಈ ಯಶಸ್ಸು ಕೇಲವ ತೆಲುಗು ಮಾತ್ರವಲ್ಲದೇ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಹೆಮ್ಮೆಯಾಗಿದೆ. ಭಾರತೀಯ ಚಿತ್ರ ರಂಗದಲ್ಲಿ ಮುಂದೆ ರಬಲಿರುವ ಸಿನಿಮಾಗಳು ಇದಕ್ಕಿಂತ ಹೆಚ್ಚಿನ ಯಶಸ್ಸು ಕಾಣಲಿ ಎಂದು ಹೇಳುತ್ತಾ ಈ ವಿಶೇಷ ಕಾರ್ಯಕ್ರಮವನ್ನು ಮುಗಿಸುತ್ತಿದ್ದೇವೆ.