ಅಪ್ಪು ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ: 'ಕರ್ನಾಟಕ ರತ್ನ'ನ ನೆನಪಿನಲ್ಲಿ ಅಭಿಮಾನಿಗಳು ತಲ್ಲೀನ

ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಕಳೆದ 10 ದಿನಗಳಿಂದ ಸೆಲೆಬ್ರೇಷನ್'ಗಾಗಿ ಅಪ್ಪು ಫ್ಯಾನ್ಸ್ ತಯಾರಿ ಮಾಡಿಕೊಳ್ತಿದ್ದಾರೆ. 

Share this Video
  • FB
  • Linkdin
  • Whatsapp

ಕಳೆದ ವರ್ಷ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡಿದ್ದ ಅಭಿಮಾನಿಗಳು, ಈ ಭಾರಿ ಅದಕ್ಕೂ ಒಂದು ಕೈ ಮಿಗಿಲೆನ್ನುವಂತೆ ಸೆಲೆಬ್ರೇಷನ್ ಮಾಡೋದಕ್ಕೆ ಯೋಜನೆ ರೂಪಿಸಿದ್ದಾರೆ. ಪುನೀತ್ ಸಮಾಧಿ ಎದುರು ಹಲವು ಕಾರ್ಯಕ್ರಮಗಳನ್ನು ಮಾಡೋದಕ್ಕೆ ಯೋಜನೆ ರೂಪಿಸಿದ್ದಾರೆ. ರಕ್ತದಾನ, ಅನ್ನದಾನ ಹಾಗೂ ನೇತ್ರದಾನ ನಡೆಯಲಿದೆ. ಇನ್ನು ಪುನೀತ್ ಜನ್ಮೋತ್ಸವಕ್ಕೆ ಸ್ಯಾಂಡಲ್ ವುಡ್ ಕಡೆಯಿಂದ ಮೂರು ಬಿಗ್ ಟ್ರೀಟ್'ಗಳು ರೆಡಿಯಾಗಿವೆ. ಒಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ತೆರೆ ಕಾಣುತ್ತಿದೆ. ಅದೇ ದಿನ ಅಪ್ಪು ನಟಿಸಿರೋ ಗಂಧದಗುಡಿ ಡಾಕ್ಯೂಮೆಂಟ್ರಿ ಸಿನಿಮಾ ರೀ ರಿಲೀಸ್ ಆಗ್ತಿದೆ. ಅಷ್ಟೆ ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಸಿನಿಮಾ ಕೂಡ ಅದೇ ದಿನ ತೆರೆ ಕಾಣುತ್ತಿದೆ. ಈ ಮೂಲಕ ಅಪ್ಪು ಸೆಲೆಬ್ರೇಷನ್'ನಲ್ಲಿ ಇಡೀ ಸ್ಯಾಂಡಲ್ ವುಡ್ ತಲ್ಲೀನವಾಗುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಳೆ ಮುಂಬೈನಲ್ಲಿ ಕಬ್ಜ ಟ್ರೈಲರ್‌ ರಿಲೀಸ್: ಕಾದಿದೆ ಬಿಗ್ ಸರ್ಪ್ರೈಸ್?

Related Video