ಸಮಂತಾ ಎದುರಿಗೆ ಬಂದ್ರೆ ಏನ್ಮಾಡ್ತೀರಿ? ನಾಗಚೈತನ್ಯ ಶಾಕಿಂಗ್ ರಿಯಾಕ್ಷನ್

ಟಾಲಿವುಡ್ ಸ್ಟಾರ್ ನಾಗಚೈತನ್ಯ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ್ ಟ್ಯಾಟೂ ಮತ್ತು ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ನಾಗಚೈತನ್ಯ ಅವರಿಗೆ ನಿರೂಪಕ ಒಂದು ವೇಳೆ ಸಮಂತಾ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದರು. ಇದಕ್ಕೆ ನಾಗ್, ಹಾಯ್ ಹೇಳಿ ಒಂದು ಹಗ್ ಮಾಡುತ್ತೇನೆ ಎಂದು ಹೇಳಿದರು.

First Published Aug 13, 2022, 3:10 PM IST | Last Updated Aug 13, 2022, 3:10 PM IST

ಟಾಲಿವುಡ್ ಸ್ಟಾರ್ ನಾಗಚೈತನ್ಯ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ್ ಟ್ಯಾಟೂ ಮತ್ತು ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ನಾಗಚೈತನ್ಯ ಅವರಿಗೆ ನಿರೂಪಕ ಒಂದು ವೇಳೆ ಸಮಂತಾ ಸಿಕ್ಕರೆ ಏನು ಮಾಡುತ್ತೀರಿ ಎಂದು ಕೇಳಿದರು. ಇದಕ್ಕೆ ನಾಗ್, ಹಾಯ್ ಹೇಳಿ ಒಂದು ಹಗ್ ಮಾಡುತ್ತೇನೆ ಎಂದು ಹೇಳಿದರು. ಇನ್ನು  ರ್ಯಾಪಿಡ್ ಫೈರ್ ನಲ್ಲಿ, ಟ್ಯಾಟೂ ಬಗ್ಗೆ ಮಾತನಾಡಿದ್ದರು. ಸಮಂತಾ ಮತ್ತು ನಾಗಚೈತನ್ಯ ಒಂದೇ ರೀತಿ ಟ್ಯಾಟೂ ಹಾಕಿದ್ದಾರೆ. ಅಂದಹಾಗೆ ನಾಗಚೈತನ್ಯ ಕೈಯಲ್ಲಿರುವ ಟ್ಯಾಟೂ ಏನು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ನಾಗ್ ಬಹಿರಂಗ ಪಡಿಸಿದ್ದಾರೆ. ಇದು ಮದುವೆಯಾದ ದಿನಾಂಕದ ಬಗ್ಗೆ ಇರುವ ಟ್ಯಾಟೂ ಎಂದು ಹೇಳಿದ್ದಾರೆ.  ಅಲ್ಲದೇ ಈ ಟ್ಯಾಟೂ ಸದ್ಯಕ್ಕೆ ತೆಗೆಸುವ ಪ್ಲಾನ್ ಇಲ್ಲ ಎಂದಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಚೈ ಟ್ಯಾಟೂ ಹಾಕಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ.