Asianet Suvarna News Asianet Suvarna News

ಭೈರತಿ ರಣಗಲ್‌ ಮೀರಿಸುವಂತಿದೆ ವೆಟ್ರಿ ಸ್ವ್ಯಾಗ್: ಸ್ಟಾರ್​ ನಟ ಮಮ್ಮುಟ್ಟಿಯೊಂದಿಗೆ ರಾಜ್ ಬಿ ಶೆಟ್ಟಿ!

ಪರಭಾಷಿಗ ಸ್ಟಾರ್ ನಟರು ಕೂಡ ರಾಜ್​ ಬಿ ಶೆಟ್ಟಿ ನಟನೆ ನಿರ್ದೇಶನ ನೋಡಿ ಹೊಗಳಿ ಕೊಂಡಾಡುತ್ತಾರೆ. ಹೀಗಾಗಿ ರಾಜ್ ಬಿ ಶೆಟ್ಟಿಗೆ ಪಕ್ಕದ ಕೇರಳದಲ್ಲೂ ಬೇಡಿಕೆ ಇದ್ದು, ಇದೀಗ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿ ಮಿಂಚುತ್ತಿದ್ದಾರೆ.

ಕನ್ನಡದ ಖ್ಯಾತ ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ ಸಿನಿಮಾಗಳಿಗೆ ಸೌತ್​​ನಲ್ಲಿ ಭಾರಿ ಬೇಡಿಕೆ ಇದೆ. ರಾಜ್​ ಬಿ ಶೆಟ್ಟಿ ನಟನೆ ನಿರ್ದೇಶನದ ಟ್ಯಾಲೆಂಟ್​​ಗೆ ಕನ್ನಡ ಸಿನಿ ಪ್ರೇಕ್ಷಕರು ಯಾವಾಗ್ಲು ಫುಲ್ ಮಾರ್ಕ್ಸ್​ ಕೊಡುತ್ತಾರೆ. ಅಷ್ಟೆ ಅಲ್ಲ ಪರಭಾಷಿಗ ಸ್ಟಾರ್ ನಟರು ಕೂಡ ರಾಜ್​ ಬಿ ಶೆಟ್ಟಿ ನಟನೆ ನಿರ್ದೇಶನ ನೋಡಿ ಹೊಗಳಿ ಕೊಂಡಾಡುತ್ತಾರೆ. ಹೀಗಾಗಿ ರಾಜ್ ಬಿ ಶೆಟ್ಟಿಗೆ ಪಕ್ಕದ ಕೇರಳದಲ್ಲೂ ಬೇಡಿಕೆ ಇದ್ದು, ಇದೀಗ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸಿನಿಮಾದಲ್ಲಿ ರಾಜ್​ ಬಿ ಶೆಟ್ಟಿ ಮಿಂಚುತ್ತಿದ್ದಾರೆ. ಮಮ್ಮುಟ್ಟಿ ಅವಏ ಸ್ವತಃ ನಿರ್ಮಿಸಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಟರ್ಬೋ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದು, ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ವೈಶಾಕ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಸೇರಿದಂತೆ ದೊಡ್ಡ ಸ್ಟಾರ್​​ಗಳು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾವನ್ನ ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ' ಲೈಟರ್ ಬುದ್ಧ ಫಿಲಂಸ್' ವಿತರಣೆ ಮಾಡುತ್ತಿದ್ದು ಸಧ್ಯದಲ್ಲೇ ಬಿಡುಗಡೆ ದಿನಾಂಕ ಅನೌನ್ಸ್ ಆಗಲಿದೆ.

Video Top Stories