ಮುಂದಿನ ವಾರ ಮದುವೆ, ಈಗೇನ್ ಮಾಡ್ತಿದಾರೆ ಕೀರ್ತಿ ಸುರೇಶ್?
ಟಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ತಾರೆಗಳು, ದಿಗ್ಗಜರು ಕೀರ್ತಿ ಸುರೇಶ್ ಹಾಗೂ ಆಂಟನಿ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೀರ್ತಿ ಸುರೇಶ್ ಮದುವೆಗೆ ಗೋವಾದ ಆ ತಾಣ ಸಿಂಗಾರಗೊಳ್ಳುತ್ತಿದೆ. ..
ಇತ್ತೀಚಿಗಷ್ಟೇ ಕೀರ್ತಿ ಸುರೇಶ್ ತಮ್ಮ ಭಾವಿ ಪತಿಯನ್ನ ಪರಿಚಯಿಸಿದ್ರು. ತಮ್ಮ 15 ವರ್ಷಗಳ ಗೆಳೆಯ ಅಂಟೋನಿ ತಟ್ಟಿಳ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡ್ತಿರೋ ಖುಷಿಯ ಸಂಗತಿ ಹಂಚಿಕೊಂಡಿದ್ರು. ಇದೀಗ ಕೀರ್ತಿ ಮದುವೆಯ ಆಮಂತ್ರಣ ಪತ್ರಿಕೆಯೂ ರೆಡಿಯಾಗಿದೆ. ಸಿನಿಲೋಕದ ಸೆಲೆಬ್ರಿಟಿಗಳಿಗೆ ಮಹಾನಟಿ ಕೀರ್ತಿ ಆಹ್ವಾನ ಪತ್ರಿಕೆಯನ್ನ ಹಂಚ್ತಾ ಇದ್ದಾರೆ. ಇದೇ ಡಿಸೆಂಬರ್ 11 ಮತ್ತು 12ಕ್ಕೆ ಗೋವಾದಲ್ಲಿ ಕೀರ್ತಿ-ಆಂಟನಿ ಮದುವೆ ನಡೆಯಲಿದ್ದು, ಡೆಸ್ಟಿನೇಶನ್ ವೆಡ್ಡಿಂಗ್ಗೆ ತಯಾರಿ ಜೋರಾಗಿ ನಡೀತಾ ಇದೆ.
ಟಾಲಿವುಡ್ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ ತಾರೆಗಳು, ದಿಗ್ಗಜರು ಕೀರ್ತಿ ಸುರೇಶ್ ಹಾಗೂ ಆಂಟನಿ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೀರ್ತಿ ಸುರೇಶ್ ಮದುವೆಗೆ ಗೋವಾದ ಆ ತಾಣ ಸಿಂಗಾರಗೊಳ್ಳುತ್ತಿದೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ..