Asianet Suvarna News Asianet Suvarna News

ಆನೆ ಆರೈಕೆ ಕಷ್ಟಕ್ಕಿಂತ ಅದರ ಪ್ರೀತಿಯೇ ಮಿಗಿಲು, ಸಾಕ್ಷ್ಯಚಿತ್ರ ಗೆಲುವು ಸಂಭ್ರಮಿಸಿದ ಬೆಳ್ಳಿ!

ಅನಾಥ ಆನೇ ಮರಿಗಳ ಆರೈಕೆ ಮಾಡುವ ಬೊಮ್ಮನ್ ಹಾಗೂ ಬೆಳ್ಳಿಯ ಸ್ಪೂರ್ತಿದಾಯಕ ಕತೆ ದಿ ಎಲಿಫೆಂಟ್ ವಿಸ್ಪರ್ಸ್  ಆಸ್ಕರ್ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಆನೆಯ ಆರೈಕೆ ಮಾಡುವ ಬೆಳ್ಳಿ ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ್ದಾರೆ. 

First Published Mar 13, 2023, 9:02 PM IST | Last Updated Mar 13, 2023, 9:01 PM IST

ಸ್ಫೂರ್ತಿದಾಯಕ ಜೀವನವನ್ನು ಬಿಂಬಿಸುವ ದಿ ಎಲಿಫೆಂಟ್ ವಿಸ್ಪರ್ಸ್  ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಮದುಮಲೈ ಅರಣ್ಯ ಶಿಬಿರದಲ್ಲಿ ಈ ಚಿತ್ರ ಚಿತ್ರೀಕರಿಸಲಾಗಿದೆ. ಅನಾಥ ಆನೇ ಮರಿಗಳ ಆರೈಕೆ ಮಾಡುವ ಬೊಮ್ಮನ್ ಹಾಗೂ ಬೆಳ್ಳಿಯ ಸ್ಪೂರ್ತಿದಾಯಕ ಕತೆಯೇ ಈ ಚಿತ್ರದ ತಿರುಳು. ಈ ಸಾಕ್ಷ್ಯಚಿತ್ರ ಆಸ್ಕರ್ ಗೆದ್ದ ಸಂಭ್ರಮವನ್ನು ಬೆಳ್ಳಿ ಏಷ್ಯಾನೆಟ್ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಆನೆ ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಕಷ್ಟಪಡಬೇಕು. ಆದರೆ ಆನೆಯ ಪ್ರೀತಿಯ ಮುಂದೆ ನನ್ನ ಕಷ್ಟ ಏನೂ ಅಲ್ಲ. ನನಗೆ ಆನೆಯ ಪ್ರೀತಿಯೇ ಮಿಗಿಲು. ನನಗೆ ಕಷ್ಟವೇ ಗೊತ್ತಾಗಲಿಲ್ಲ  ಎಂದಿದ್ದಾರೆ. ಈಗ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಬಂದು ಮಾತನಾಡಿಸುತ್ತಾರೆ. ನಿಮ್ಮ ಚಿತ್ರ ನೋಡಿದ್ದೇವೆ. ತುಂಬಾ ಸಂತೋಷವಾಗಿದೆ ಎನ್ನುತ್ತಿದ್ದಾರೆ. ಬಹುತೇಕರು ಆನೆಯ ಫೋಟೋ ತೆಗೆಯುವ ಬದಲು ನನ್ನ ಜೊತೆ ನಿಂತು ಫೋಟೋ ತೆಗೆಯುತ್ತಿದ್ದಾರೆ. ನಾನು ಮನೆಯಲ್ಲಿದ್ದರೆ, ಇಲ್ಲಿಗೆ ಬಂತು ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿರುವುದು ಅತೀವ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.