'ಪುಷ್ಪಾ 2' ಡಾನ್ಸ್‌ ಕುಣಿತದ ನಂತ್ರ ಶ್ರೀಲೀಲಾ ಕಥೆ ನೋಡಿ; ಹೀಗಾಗುತ್ತೆ ಅಂದ್ಕೊಂಡಿದ್ರಾ?

ಅಸಲಿಗೆ ಐಟಂ ಸಾಂಗ್​ಗೆ ಕುಣಿಯಲಾರೆ ಅಂತ ಪ್ರತಿಜ್ಞೆ ಮಾಡಿದ್ದ ಕಿಸ್ ಬ್ಯೂಟಿ ಪುಷ್ಪನ ಆಫರ್ ಬಂದಾಗ ಯಾವ ಪ್ರತಿಫಲವೇ ಬಯಸದೇ ತನ್ನ ಪ್ರತಿಜ್ಞೆ ಮುರಿದಿದ್ಲು. ಇದಕ್ಕೆ ಸಂಭಾವನೆಯನ್ನ ಕೂಡ ಪಡೆದಿಲ್ಲ ಶ್ರೀಲೀಲಾ...

First Published Dec 16, 2024, 2:53 PM IST | Last Updated Dec 16, 2024, 2:53 PM IST

ಸ್ಯಾಂಡಲ್​ವುಡ್​ನ ಕಿಸ್ ಬ್ಯೂಟಿ ಶ್ರೀಲೀಲಾ (Sreeleela) ಪಕ್ಕದ ಟಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದನ್ನ ನೋಡಿ ಈಕೆ ಮತ್ತೊಬ್ಬ ರಶ್ಮಿಕಾ (Rashmika Mandanna) ಆಗ್ತಾಳೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ರು. ಆದ್ರೆ ಅದ್ಯಾಕೋ ನಸೀಬು ಕೈ ಕೊಟ್ಟು ಶ್ರೀಲೀಲಾ ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ಸೋಲು ಕಂಡಿದ್ವು. ಈಗ ಕಿಸಿಕ್ ಅಂತ ಕುಣಿದ ಬ್ಯೂಟಿಗೆ ಮತ್ತೆ ಲಕ್ ಕುದುರಿದೆ. ಆಫರ್ಸ್ ಹೆಚ್ಚಿವೆ.. ಸಂಭಾವನೆ ಏರಿದೆ.

ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಶ್ರೀಲೀಲಾಗೆ ಮಸ್ತ್ ಆಫರ್ಸ್: ಪುಷ್ಪ-2 ಸಿನಿಮಾ ಸಾವಿರ ಪ್ಲಸ್ ಕೋಟಿ ಗಳಿಕೆ ಮಾಡಿದೆ. ಈ ಗೆಲುವಿನಲ್ಲಿ ಕಿಸಿಕ್ ಅಂತ ಕುಣಿದು ಎಲ್ಲರನ್ನು ಹುಚ್ಚೆದ್ದು ಕುಣಿಸಿದ ಶ್ರೀಲೀಲಾಳ ಪಾಲು ಕೂಡ ಇದೆ. 

ಅಸಲಿಗೆ ಈ ಸಾಂಗ್ ರಿಲೀಸ್ ಆದಾಗ, ಮೊದಲ ಭಾಗದಲ್ಲಿದ್ದ ಸಮಂತಾಳ ಸಾಂಗ್​​ನಷ್ಟು ಮಜವಾಗಿಲ್ಲ ಅನ್ನೋ ಮಾತು ಕೇಳಿ ಬಂದಿದ್ವು. ಆದ್ರೆ ಸಿನಿಮಾದಲ್ಲಿ ಬರೋ ಆ ಸನ್ನಿವೇಶ.. ಹಾಡಿಗೆ ಕೊಡುವ ಲೀಡ್ ಅದ್ಯಾಪರಿ ಕಿಕ್ ಕೊಡುತ್ತೆ ಅಂದ್ರೆ ಕಿಸಿಕ್ ಹಾಡು ಅಕ್ಷರಶಃ ಮತ್ತೇರಿಸುತ್ತೆ.

ಅಸಲಿಗೆ ಐಟಂ ಸಾಂಗ್​ಗೆ ಕುಣಿಯಲಾರೆ ಅಂತ ಪ್ರತಿಜ್ಞೆ ಮಾಡಿದ್ದ ಕಿಸ್ ಬ್ಯೂಟಿ ಪುಷ್ಪನ ಆಫರ್ ಬಂದಾಗ ಯಾವ ಪ್ರತಿಫಲವೇ ಬಯಸದೇ ತನ್ನ ಪ್ರತಿಜ್ಞೆ ಮುರಿದಿದ್ಲು. ಇದಕ್ಕೆ ಸಂಭಾವನೆಯನ್ನ ಕೂಡ ಪಡೆದಿಲ್ಲ ಶ್ರೀಲೀಲಾ.

ಆದ್ರೆ ಸಿನಿಮಾ ರಿಲೀಸ್ ನಂತರ ತಾನೇ ತಾನಾಗಿ ಶ್ರೀಲೀಲಾಗೆ ಪ್ರತಿಫಲಗಳು ಒಲಿದು ಬರ್ತಾ ಇವೆ. ಹಲವು ಬಿಗ್ ಆಫರ್ಸ್ ಬರ್ತಾ ಇವೆ. ನಾಗಚೈತನ್ಯ ನಟನೆಯ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸೋ ಬಂಪರ್ ಚಾನ್ಸ್ ಸಿಕ್ಕಿದೆ. ಇನ್ನೂ ಶ್ರೀಲೀಲಾ ಸಂಭಾವನೆ ಕೂಡ ದುಪ್ಪಟ್ಟಾಗಿದೆ. 

ಅಸಲಿಗೆ ಶ್ರೀಲೀಲಾ ಟಾಲಿವುಡ್​ಗೆ  ಎಂಟ್ರಿ ಕೊಟ್ಟಾಗಲೇ ಈಕೆ ಮತ್ತೊಬ್ಬ ರಶ್ಮಿಕಾ ಆಗ್ತಾಳೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ರು. ಈಕೆಯ ಡ್ಯಾನ್ಸಿಂಗ್ ಸ್ಕಿಲ್, ಮತ್ತೇರಿಸೋ ಮೈಮಾಟ, ಕಿಕ್ಕೇರಿಸೋ ನಗು ನೋಡಿದವರು ಈಕೆ ಎಲ್ಲಿಗೋ ರೀಚ್ ಆಗ್ತಾಳೆ ಅಂದಿದ್ರು.

ಆದ್ರೆ ಅದ್ಯಾಕೋ ಶ್ರೀಲೀಲಾ ಹೆಜ್ಜೆ ಹಾಕಿದ ಹಾಡುಗಳು ಹಿಟ್ ಆದಷ್ಟು ನಟಿಸಿದ ಸಿನಿಮಾಗಳು ಕ್ಲಿಕ್ ಆಗ್ಲಿಲ್ಲ. ಇದೀಗ ಕಿಸಿಕ್ ಹಾಡೂ  ಗೆದ್ದಿದೆ.. ಪುಷ್ಪ-2 ಸಿನಿಮಾನೂ ಗೆದ್ದು ಬೀಗಿದೆ. ಸೋ ಮತ್ತೆ ಶ್ರೀಲೀಲಾಗೆ ಲಕ್ ಮರಳಿ ಒಲಿದಿದೆ. ಕಿಸ್ ಬ್ಯೂಟಿಯ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ.

Video Top Stories