ರಾಜ್ ಕಪೂರ್ ಶತಕ ಸಂಭ್ರಮ, ಮೋದಿಗೆ ಆಹ್ವಾನ ಕೊಟ್ಟ ಕಪೂರ್​ ಫ್ಯಾಮಿಲಿ!

ಇಂಡಿಯನ್ ಸಿನಿಇಂಡಸ್ಟ್ರಿಯ ಲೆಜೆಂಡ್ , ಬಾಲಿವುಡ್ ದಂತಕಥೆ,  ಶೋ ಮ್ಯಾನ್​ ರಾಜ್​ಕಪೂರ್ ಅವರ ಜನ್ಮಶತಮಾತ್ಸವ ವರ್ಷ ಇದು. ರಾಜ್​ಕಪೂರ್ 100ರ ಸಂಭ್ರಮವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡೋದಕ್ಕೆ  ಕಪೂರ್ ಫ್ಯಾಮಿಲಿ ಪ್ಲ್ಯಾನ್ ಮಾಡಿಕೊಂಡಿದೆ. ಡಿಸೆಂಬರ್ 13 ರಿಂದ 15ರ ವರೆಗೆ..

First Published Dec 13, 2024, 11:45 AM IST | Last Updated Dec 13, 2024, 11:45 AM IST

ಭಾರತೀಯ ಸಿನಿರಂಗದ ಶೋಮ್ಯಾನ್ ರಾಜ್ ಕಪೂರ್​ರ ಜನ್ಮಶತಮಾನೋತ್ಸವ ನಡೀತಾ ಇದ್ದು, ಇದನ್ನ ಅದ್ಧೂರಿಯಾಗಿ ನಡೆಸೋಕೆ ಕಪೂರ್ ಫ್ಯಾಮಿಲಿ ಪ್ಲ್ಯಾನ್ ಮಾಡಿಕೊಂಡಿದೆ. ಪ್ರಧಾನಿ ಮೋದಿಯವರನ್ನ ಭೇಟಿ ಮಾಡಿ ಈ ಸಮಾರಂಭಕ್ಕೆ  ಆಹ್ವಾನ ಕೊಟ್ಟಿದೆ ಕಪೂರ್ ಕುಟುಂಬ. ಕಪೂರ್ ಖಾಂದಾನ್​ನ ಜೊತೆ ಕೂರಿಸಿಕೊಂಡು ಸಂವಾದ ನಡೆಸಿರೋ ಮೋದಿ, ರಾಜ್​ಕಪೂರ್​ ಬಗ್ಗೆ ತಮಗಿರೋ ವಿಶೇಷ ಗೌರವವನ್ನ ಸೂಚಿಸಿದ್ದಾರೆ.

ಹೌದು, ಇಂಡಿಯನ್ ಸಿನಿಇಂಡಸ್ಟ್ರಿಯ ಲೆಜೆಂಡ್ , ಬಾಲಿವುಡ್ ದಂತಕಥೆ,  ಶೋ ಮ್ಯಾನ್​ ರಾಜ್​ಕಪೂರ್ ಅವರ ಜನ್ಮಶತಮಾತ್ಸವ ವರ್ಷ ಇದು. ರಾಜ್​ಕಪೂರ್ 100ರ ಸಂಭ್ರಮವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡೋದಕ್ಕೆ  ಕಪೂರ್ ಫ್ಯಾಮಿಲಿ ಪ್ಲ್ಯಾನ್ ಮಾಡಿಕೊಂಡಿದೆ. ಡಿಸೆಂಬರ್ 13 ರಿಂದ 15ರ ವರೆಗೆ '100 ಇಯರ್ಸ್ ಆಫ್ ರಾಜ್ಕಪೂರ್' ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.  ಜನ್ಮ ದಿನದ ಗೌರವಾರ್ಥವಾಗಿ ದೇಶದ ಪ್ರಮುಖ 40 ನಗರಗಳ 135 ಸ್ಕ್ರೀನ್ಗಳಲ್ಲಿ ರಾಜ್ ಕಪೂರ್ ಅವರ 10 ಐಕಾನಿಕ್ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ ನೀಡಿದೆ ಕಪೂರ್ ಖಾಂಧಾನ್. ಪ್ರಧಾನ ಮಂತ್ರಿಗಳ ಕಚೇರಿಗೆ ಕಪೂರ್ ಫ್ಯಾಮಿಲಿ ಸ್ಟಾರ್ಸ್ ಭೇಟಿ ಕೊಟ್ಟಿದ್ದು ಮೋದಿ ಇವರೆಲ್ಲರನ್ನ ಜೊತೆ ಕೂರಿಸಿಕೊಂಡು ಹರಟೆ ಹೊಡೆದಿದ್ದಾರೆ. ತಮಗೆ ರಾಜ್​ಕಪೂರ್ ಬಗ್ಗೆ ಇರೋ ಗೌರವ, ಅಭಿಮಾನದ ಬಗ್ಗೆ ಮಾತನಾಡಿದ್ದಾರೆ.

ಕರೀನಾ ಕಪೂರ್, ಸೈಫ್ ದಂಪತಿ, ರಿಧಿಮಾ ಕಪೂರ್, ನೀತು ಕಪೂರ್, ರಣ್‌ಬೀರ್ ಕಪೂರ್-ಅಲಿಯಾ ಭಟ್ ಕುಟುಂಬಸ್ಥರು ಪಿಎಂ ಜೊತೆ ಸಮಯ ಕಳೆದಿದ್ದಾರೆ. ಭೇಟಿ ವೇಳೆ ರಾಜ್ ಕಪೂರ್ ಅವರು ಬಳಸಿದ ವಸ್ತುವೊಂದನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ. 

ಇನ್ನು ಕರೀನಾ ಕಪೂರ್ ಮಕ್ಕಳ ಹೆಸರನ್ನ ಬರೆದು ಪ್ರಧಾನಿ ಮೋದಿ ಆಟೋಗ್ರಾಫ್ ನೀಡಿದ್ದಾರೆ. ಒಟ್ಟಾರೆ ಕಪೂರ್ ಫ್ಯಾಮಿಲಿಗೆ ಪ್ರಧಾನಿಯಿಂದ ವಿಶೇಷ ಗೌರವ ದೊರೆತಿದ್ದು, ಇದೆಲ್ಲವೂ ಲೆಜೆಂಡ್ ರಾಜ್​ಕಪೂರ್​ಗೆ ಸಿಕ್ಕ ಗೌರವ ಅಂತಿದ್ದಾರೆ ಕಪೂರ್ ಫ್ಯಾಮಿಲಿ ಸ್ಟಾರ್ಸ್.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..