
ಪಹಲ್ಗಾಮ್-ಕನ್ನಡ ಹೋಲಿಕೆ: ಕೋರ್ಟ್‌ಗೂ ಕಿಮ್ಮತ್ತು ಕೊಡದ ಗಾಯಕ ಸೋನು ನಿಗಮ್!
ಕನ್ನಡ ಹಾಡು ಕೇಳಿದ್ದಕ್ಕೆ ಭಯೋತ್ಪಾದಕರ ಜೊತೆಗೆ ಹೋಲಿಕೆ ಮಾಡಿ ಕನ್ನಡಿಗರನ್ನ ಕೆರಳಿಸಿದ್ದ ಸೋನು ನಿಗಮ್ ಮೇಲೆ ದೂರು ದಾಖಲಾಗಿತ್ತು. ಸೋನು ಪೊಲೀಸರ ಕೈಗೆ ಸಿಕ್ತಾ ಇಲ್ಲ. ಸೋ ಸೋನುಗೆ ಪಾಠ ಕಲಿಸೋದಕ್ಕೆ ಕೋರ್ಟ್ ಮೆಟ್ಟಿಲೇರೋದಕ್ಕೆ ಪೊಲೀಸರು ಮುಂದಾಗಿದ್ದಾರೆ.
ಗಾಯಕ ಸೋನು ನಿಗಮ್ ಮೇಲೆ ದೂರು ದಾಖಲಾಗಿ ಒಂದೂವರೇ ತಿಂಗಳಾಯ್ತು. ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಅಂತ ಕೇಳಿದ್ದಕ್ಕೆ ಪೆಹಲ್ಗಾಮ್ ದಾಳಿಯ ಜೊತೆಗೆ ಸೋನು ಹೋಲಿಕೆ ಮಾಡಿದ್ರು. ಇದು ಕನ್ನಡಿಗರನ್ನೆಲ್ಲಾ ಕೆರಳಿಕೆಂಡವಾಗುವಂತೆ ಮಾಡಿತ್ತು. ಸೋನು ನಿಗಮ್ ವಿರುದ್ದ ಪ್ರತಿಭಟನೆ ನಡೆದಿದ್ವು. ಬೆಂಗಳೂರಿನ ಅವಲಹಳ್ಳಿ ಠಾಣೆಯಲ್ಲಿ ಈ ಬಗ್ಗೆ ಕಂಪ್ಲೆಂಟ್ ಕೂಡ ದಾಖಲಾಗಿತ್ತು. ಇಷ್ಟೆಲ್ಲಾ ಆದ್ರೂ ತನ್ನ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದ ಸೋನು , ಹೈಕೋರ್ಟ್ ಮೆಟ್ಟಿಲೇರಿ ತನ್ನ ವಿರುದ್ದ ಹಾಕಿರೋ ಎಫ್ಐಆರ್ ರದ್ದು ಮಾಡುವಂತೆ ಕೇಳಿಕೊಂಡಿದ್ರು. ಸೋನು ನಿಗಮ್ ವಿರುದ್ದ ಬಲವಂತದ ಕ್ರಮ ಬೇಡ. ಆದರೆ ಸೋನು ನಿಗಂ ಪೊಲೀಸರ ಮುಂದೆ ನೇರವಾಗಿ ಅಥವಾ ಆನ್ಲೈನ್ ಮೂಲಕ ಹೇಳಿಕೆ ದಾಖಲಿಸುವಂತೆ ಕೋರ್ಟ್ ಸೂಚಿಸಿತ್ತು. ಸೋನು ಹೇಳಿಕೆ ಪಡೆಯೋದಕ್ಕೆ ಪೊಲೀಸರು ಪ್ರಯತ್ನ ಪಟ್ರೆ ಸೋನು ಸಂಪರ್ಕಕ್ಕೆ ಸಿಕಿಲ್ಲ. ಸೋನು ಮ್ಯಾನೇಜರ್ ಅವರು ಬ್ಯುಸಿ ಇದ್ದಾರೆ ಮುಂದೆ ತಿಳಿಸ್ತಿನಿ ಅಂತ ಹೇಳ್ತಾ ಇದ್ದಾರೆ. ಹೀಗೆ ಮುಂದುವರೆದರೆ ಹೈಕೋರ್ಟ್ ಗಮನಕ್ಕೆ ತರ್ತೀವಿ ಅಂತ ಪೊಲೀಸರು ಎಚ್ಚರಿಸಿದರೂ ಸೋನು ಕ್ಯಾರೇ ಅಂದಿಲ್ಲ.