Maha Shivratri 2022: ಶಿವನ ಜಪ ಮಾಡಿ ಕುಣಿದ ಸ್ಟಾರ್ ಹೀರೋಯಿನ್ಸ್!
ಮಹಾ ಶಿವರಾತ್ರಿಯಂದು ಸದ್ಗುರು ಜಗ್ಗಿ ವಾಸುದೇವ್ ಅವರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟಿಯರೆಲ್ಲಾ ಶಿವನ ಹಾಡಿಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ.
ಈ ಬಾರಿ ಮಹಾ ಶಿವರಾತ್ರಿ (Maha Shivratri) ಸಂಭ್ರಮ ಅದ್ಧೂರಿಯಾಗಿ ನಡೆಯಿತು. ಕೊರೋನಾದಿಂದ ಕಳೆದ 2 ವರ್ಷಗಳಿಂದ ಮಂಕಾಗಿದ್ದ ಮಹಾ ಶಿವರಾತ್ರಿ ಹಬ್ಬ ಈ ಬಾರಿ ಜೋರಾಗಿ ನಡೆದಿದೆ. ಸೆಲೆಬ್ರಿಟಿಗಳು (Celebrities) ಕೂಡಾ ಜಾಗರಣೆ ಮಾಡಿ ಶಿವರಾತ್ರಿಯನ್ನು ಆಚರಿಸಿದ್ದಾರೆ. ಅದರಲ್ಲೂ ಪ್ರತಿ ವರ್ಷ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಸಾನಿಧ್ಯದಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮ ಸಾಕಷ್ಟು ವಿಶೇಷತೆಗಳಿಂದ ಕೂಡಿರುತ್ತದೆ.
Yash: 'ಕೆಜಿಎಫ್ 2' ಚಿತ್ರದ ಪ್ಯಾನ್‌ವರ್ಲ್ಡ್ ಪ್ರಚಾರಕ್ಕೆ ಭರ್ಜರಿ ತಯಾರಿ
ಈ ಬಾರಿ ಕೊಯಂಬತ್ತೂರಿನಲ್ಲಿ (koyambathur) ಸದ್ಗುರುಗಳ ಸಮ್ಮುಖದಲ್ಲಿ ಶಿವರಾತ್ರಿ ಜಾಗರಣೆ ನಡೆದಿದ್ದು, ವ್ರತ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ (Sandalwood) ನಟಿ ಶ್ರೀಲೀಲಾ (Sreeleela), ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menon), ಲಾವಣ್ಯ ತ್ರಿಪಾಠಿ (Lavanya Tripathi) ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಶಿವನ ಜಪ ಮಾಡಿ ಕುಣಿದಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ (Viral) ಆಗುತ್ತಿದೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies