
ಒಬ್ಬ ಸೂಪರ್ ಸ್ಟಾರ್.. ಒಂದು ಮರ್ಡರ್, ಏನಿದು ಕಾಂತ ಸಿನಿಮಾ ಹಿಂದಿನ ಕಹಾನಿ..?
ಕಾಂತಾ ಎಂಬ ಪ್ಯಾನ್ ಇಂಡಿಯಾ ಸಿನಿಮಾ ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ನೈಜ ಘಟನೆ ಆಧಾರಿತ ಚಿತ್ರವಾಗಿದೆ.
ಕಾಂತಾ ಎಂಬ ಪ್ಯಾನ್ ಇಂಡಿಯಾ ಸಿನಿಮಾ ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಈ ಚಿತ್ರದ ಕಥೆ 1950ರ ದಶಕದ ತಮಿಳು ಸಿನಿರಂಗದ ಮೊದಲ ಸೂಪರ್ ಸ್ಟಾರ್ ಎಂ.ಕೆ.ಟಿ ಭಾಗವತರ್ ಅವರ ಜೀವನಾಧಾರಿತವಾಗಿದೆ. ಭಾಗವತರ್ ಕೊಲೆ ಆರೋಪದಿಂದ ಜೈಲಿಗೆ ಹೋಗಿದ್ದರು, ಆದರೆ ಅವರ ಸಿನಿಮಾಗಳು ಜೈಲಿನ ಪಕ್ಕದ ಥಿಯೇಟರ್‌ಗಳಲ್ಲಿ ಪ್ರದರ್ಶನವಾಗುತ್ತಿದ್ದವು. ಈ ಹಿನ್ನೆಲೆ ಕೇಳಿದಾಗ, ಕೆಲವರಲ್ಲಿ ಇದು ಸ್ಯಾಂಡಲ್‌ವುಡ್ ನಟ ದರ್ಶನ್ ಮೇಲಿನ ಪ್ರಕರಣದಾದರೂ ಎಂಬ ಅನುಮಾನ ಮೂಡಿದೆ. ಆದರೆ ಈ ಸಿನಿಮಾ ದರ್ಶನ್ ಕುರಿತಲ್ಲ, ಅದು ಭಾಗವತರ್ ಅವರ ಕುರಿತಾದ ನೈಜ ಘಟನೆಯನ್ನಾಧರಿಸಿದೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಈ ಚಿತ್ರವು ಕನ್ನಡದ ಜೊತೆಗೆ ಮಲೆಯಾಲಂ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಭಾಗ್ಯಶ್ರೀ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.