ಜ್ಯೋತಿಷಿ ಮಾತು ಕೇಳಿ ವಿಜಯ್ ದೇವರಕೊಂಡ ಜೊತೆ ಬ್ರೇಕಪ್ ಮಾಡಿಕೊಂಡ್ರಾ ರಶ್ಮಿಕಾ?

ರಶ್ಮಿಕಾ, ಜ್ಯೋತಿಷಿ ಮಾತು ಕೇಳಿ , ವಿಜಯ್ ದೇವರಕೊಂಡ ಅವರಿಂದ ಅಂತರ ಕಾಯ್ದುಕೊಳ್ತಿದ್ದಾರೆ ಅನ್ನೋ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.

First Published Aug 19, 2022, 12:13 PM IST | Last Updated Aug 19, 2022, 12:13 PM IST

ರಶ್ಮಿಕಾ ಅಂದ್ರೆ ವಿಜಯ್ ದೇವರಕೊಂಡಾ, ವಿಜಯ್ ದೇವರಕೊಂಡಾ ಅಂದ್ರೆ ರಶ್ಮಿಕಾ ಅನ್ನುವಷ್ಟರ ಮಟ್ಟಿಗೆ  ಇಬ್ಬರ ಬಗ್ಗೆ ಇಂಡಸ್ಟ್ರಿಯಲ್ಲಿ ಟಾಕ್ ಶುರುವಾಗಿತ್ತು. ಆದ್ರೆ ಈಗ ವಿಜಯ್ ದೇವರಕೊಂಡಾ ಲೈಫ್ ಗೆ ಹೊಸ ಹುಡುಗಿ ಎಂಟ್ರಿ ಆಗಿದೆ. ಕೇವಲ ವಿಜಯ್ ಲೈಫ್ ಗೆ ಮಾತ್ರವಲ್ಲ, ಅವ್ರ ಮನೆಗೆ ಬಲಗಾಲಿಟ್ಟು ಎಂಟ್ರಿಕೊಟ್ಟಿದ್ದಾಳೆ ಬಾಲಿವುಡ್ ಸುಂದರಿ. ರಶ್ಮಿಕಾ -ವಿಜಯ್ ದೇವರಕೊಂಡಾ, ಟಾಲಿವುಡ್ ನ ಕ್ಯೂಟ್ ಜೋಡಿ. ನ್ಯೂ ಇಯರ್ , ಬರ್ತಡೇ ಪಾರ್ಟಿ, ಹಬ್ಬಗಳು ಎಲ್ಲವನ್ನೂ ಒಟ್ಟೊಟ್ಟಿಗೆ ಸೆಲಬ್ರೆಟ್ ಮಾಡಿಕೊಂಡು ಜಾಲಿಯಾಗಿದ್ರು. ಪರ್ಸನಲ್ ಹಾಗೂ ಪ್ರೊಫೆಷನಲ್ ಎರಡೂ ಕಡೆ ಹ್ಯಾಪಿ ಹ್ಯಾಪಿಯಾಗಿದ್ದ ಈ ಜೋಡಿ ಮಧ್ಯೆ ಹೊಸ ಹುಡುಗಿ ಎಂಟ್ರಿ ಆಗಿದೆ. ರಶ್ಮಿಕಾ, ಜ್ಯೋತಿಷಿ ಮಾತು ಕೇಳಿ , ವಿಜಯ್ ದೇವರಕೊಂಡ ಅವರಿಂದ ಅಂತರ ಕಾಯ್ದುಕೊಳ್ತಿದ್ದಾರೆ ಅನ್ನೋ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.  ಲೈಗರ್ ಸಿನಿಮಾ ಶುರುವಾದಾಗಿನಿಂದ ನಟಿ ಅನನ್ಯಾ ಪಾಂಡೆ ಹಾಗೂ ವಿಜಯ್ ದೇವರಕೊಂಡಾ ಸಖತ್ ಕ್ಲೋಸ್ ಆಗಿದ್ದಾರೆ. ಕೆಲವರು ಇದು ಸಿನಿಮಾಗಾಗಿ ಅಂದ್ರೆ, ಇನ್ನೂ ಕೆಲವ್ರು ಸಿನಿಮಾ ಹೊರತಾಗಿ ಇವ್ರ ಮಧ್ಯೆ ಬೇರೆನೇ ಇದೆ ಅಂತಿದ್ದಾರೆ. ಸಿನಿಮಾ ಓಕೆ ಆದ್ರೆ ಮನೆಗೆ ಎಂಟ್ರಿ ಯಾಕೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.