ಪುಷ್ಪ 2 ಸಿನಿಮಾಗೆ ಸಂಭಾವನೆ ಬೇಡ ಎಂದ ಅಲ್ಲು ಅರ್ಜುನ್: ನಿರ್ಮಾಪಕರ ಜೊತೆ ಬಿಗ್ ಡೀಲ್!

ಪುಷ್ಪ ಅಲ್ಲು ಅರ್ಜುನ್ ಅವರು ನಟಿಸಿದ ಕೊನೆಯ ಚಿತ್ರ. ಇದು 2021 ರ ಕೊನೆಯಲ್ಲಿ ತೆರೆಗೆ ಬಂದಿತು. ಸುಕುಮಾರ್ ನಿರ್ದೇಶನದ ಈ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದಿದ್ದು, ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೂ ನಟ ಪಾತ್ರರಾಗಿದ್ದಾರೆ. 
 

Share this Video
  • FB
  • Linkdin
  • Whatsapp

ಪುಷ್ಪ ಅಲ್ಲು ಅರ್ಜುನ್ ಅವರು ನಟಿಸಿದ ಕೊನೆಯ ಚಿತ್ರ. ಇದು 2021 ರ ಕೊನೆಯಲ್ಲಿ ತೆರೆಗೆ ಬಂದಿತು. ಸುಕುಮಾರ್ ನಿರ್ದೇಶನದ ಈ ಚಿತ್ರವು ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದಿದ್ದು, ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೂ ನಟ ಪಾತ್ರರಾಗಿದ್ದಾರೆ. ಸದ್ಯ ಪುಷ್ಪ 2 ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಬಿಸಿನೆಸ್ ಈಗಾಗಲೇ ಜೋರಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ಚಿತ್ರತಂಡ ನಿರೀಕ್ಷಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಟ ಅಲ್ಲು ಅರ್ಜುನ್ ಅವರು ಪುಷ್ಪಾ ನಿರ್ಮಾಪಕರೊಂದಿಗೆ ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಂತೆ ಚಿತ್ರಕ್ಕೆ ಸಂಭಾವನೆ ಬೇಡ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಬದಲಾಗಿ ಚಿತ್ರದ ಲಾಭದ ಶೇ.33ರಷ್ಟು ಹಣವನ್ನು ಅವರಿಗೆ ಸಂಭಾವನೆಯಾಗಿ ನೀಡಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.

Related Video