ಪ್ರಿನ್ಸ್ ಮಹೇಶ್‌ ಬಾಬುಗೆ ತೆಲುಗು ಓದೋಕೆ ಬರೆಯೋಕೆ ಬರೋಲ್ಲ, ಡೈಲಾಗ್‌ನಲ್ಲಿ ಕಿಂಗ್..!

ಮಹೇಶ್ ಬಾಬು (Mahesh Bbu) ಟಾಲಿವುಡ್ನಲ್ಲಿ (Tollywood) ಪ್ರಿನ್ಸ್ ಅಂತಲೇ ಫೇಮಸ್. ತೆಲುಗು ಸಿನಿ ಇಂಡಸ್ಟ್ರಿಯ ಸುರದ್ರೂಪಿ ನಟ ಮಹೇಶ್ ಬಾಬು. ಟಿಟೌನ್ನ ಹ್ಯಾಂಡ್ಸಮ್ ಹಂಕ್ ಆಗಿರೋ ಈ ದೂಕುಡು ಸ್ಟಾರ್ ಸೌಂಧರ್ಯದಲ್ಲಿ ಶ್ರೀಮಂತ ಮಾತ್ರ ಅಲ್ಲ ಲೈಫ್ ಸ್ಟೈಲ್ನಲ್ಲೂ (Life Style) ಶ್ರೀಮಂತನೇ. 

Share this Video
  • FB
  • Linkdin
  • Whatsapp

ಮಹೇಶ್ ಬಾಬು (Mahesh Bbu) ಟಾಲಿವುಡ್ನಲ್ಲಿ (Tollywood) ಪ್ರಿನ್ಸ್ ಅಂತಲೇ ಫೇಮಸ್. ತೆಲುಗು ಸಿನಿ ಇಂಡಸ್ಟ್ರಿಯ ಸುರದ್ರೂಪಿ ನಟ ಮಹೇಶ್ ಬಾಬು. ಟಿಟೌನ್ನ ಹ್ಯಾಂಡ್ಸಮ್ ಹಂಕ್ ಆಗಿರೋ ಈ ದೂಕುಡು ಸ್ಟಾರ್ ಸೌಂಧರ್ಯದಲ್ಲಿ ಶ್ರೀಮಂತ ಮಾತ್ರ ಅಲ್ಲ ಲೈಫ್ ಸ್ಟೈಲ್ನಲ್ಲೂ (Life Style) ಶ್ರೀಮಂತನೇ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ '777 ಚಾರ್ಲಿ' ಹವಾ

ಹುಟ್ಟುತ್ತಲೇ ಆಗರ್ಭ ಶ್ರೀಮಂತ. ಟಾಲಿವುಡ್ನ ಟಾಪ್ ಸ್ಟಾರ್, ಹಲವು ಹೊಸತನಗಳಿಗೆ ನಾಂದಿ ಹಾಡಿದ ಕೃಷ್ಣ ಅವರ ಸುಪುತ್ರ. ಹುಟ್ಟುತ್ತಲೇ ಚಿನ್ನದ ಸ್ಪೂನ್ಅನ್ನ ಕೈಲಿ ಹಿಡಿದ ಮಹೇಶ್ ಬಾಬು ಟಾಲಿವುಡ್ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಆದ್ರೆ ಇವ್ರು ನೆಲೆಸಿರೋದು ಮಾತ್ರ ಯೂರೋಪ್‌ನಲ್ಲಿ. ಸಿನಿಮಾದ ಶೂಟಿಂಗ್ ಇದ್ದಾಗ ಮಾತ್ರ ಹೈದರಾಬಾದ್‌ಗೆ ಬಂದು ಹೋಗೋ ಪ್ರಿನ್ಸ್ ಯುರೋಪ್ನಲ್ಲೇ ಮನೆ ಮಾಡಿಕೊಂಡಿದ್ದಾರೆ. 

ಬಘೀರನಾಗಲು ರೆಡಿಯಾದ ರೋರಿಂಗ್ ಸ್ಟಾರ್; ಮತ್ತೆ ಒಂದಾಯ್ತು ಉಗ್ರಂ ಜೋಡಿ

ಹಾಗಂತ ಸಿನಿಮಾಗಳ ಮೂಲಕ ಹಣ ಮಾಡಿಕೊಂಡು ಯೂರೋಪ್‌ನಲ್ಲಿ (Europe) ಸೆಟಲ್ ಆಗಿಲ್ಲ. ತನ್ನ ಹುಟ್ಟೂರನ್ನ ಮರೆಯದ ಮಹೇಶ್ ಬಾಬು ಹೈದರಾಬಾದ್ನಲ್ಲಿರೋ ಬುರ್ರಿಪಾಲೇಂ ಸೇರಿ ಎರಡು ಹಳ್ಳಿಯನ್ನ ದತ್ತು ಪಡೆದು ಅಭಿವೃದ್ದಿ ಮಾಡ್ತಿದ್ದಾರೆ. ಅಷ್ಟೆ ಅಲ್ಲ ತನ್ನ ಸಂಭಾವನೆಯಲ್ಲಿ ಬರೋ ಶೇಕಡ 30ರಷ್ಟು ಹಣವನ್ನ ಸಮಾಜ ಸೇವೆಗೆ (Social Service) ಅಂತಲೇ ಮೀಸಲಿಟ್ಟಿದ್ದಾರೆ. 

ಮಹೇಶ್ ಬಾಬುಗೆ ಈಗ 46 ವರ್ಷ ವಯಸ್ಸು, ಆದ್ರೆ ಇಂದಿಗೂ 30 ವರ್ಷದೊಳಗಿನ ಯುವಕ ಹಾಗೆ ಪ್ರಿನ್ಸ್ ಕಾಣಿಸ್ತಾರೆ. ಅದಕ್ಕೆ ಅವರ ಆಹಾರ ಪದ್ದತಿಯೇ ಕಾರಣವಂತೆ. ಮಹೇಶ್ ಬಾಬು ಯಾವುದೇ ಕಾರಣಕ್ಕು ಮೊಸರು ಮತ್ತು ಮಸರಿನ ಪದಾರ್ಥಗಳನ್ನ ತಿನ್ನೋದೆ ಇಲ್ವಂತೆ. ಇದೇ ಅವರ ಹ್ಯಾಂಡ್ಸಮ್ ಲುಕ್ನ ಗುಟ್ಟು.

Related Video