Rajinikanth: ಮತ್ತೆ ಕನ್ನಡಕ್ಕೆ ಸೂಪರ್ ಸ್ಟಾರ್?: 4 ದಶಕಗಳ ನಂತರ ತಲೈವಾ ಎಂಟ್ರಿ
ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಕನ್ನಡದಲ್ಲಿ ನಟಿಸುತ್ತಾರೆಂಬ ಸುದ್ದಿ ಇದೀಗ ಸ್ಯಾಂಡಲ್ ವುಡ್'ನಲ್ಲಿ ಸಂಚಲನ ಮೂಡಿಸಿದೆ.
ಸುಮಾರು ನಾಲ್ಕು ದಶಕಗಳ ನಂತರ ಕರ್ನಾಟಕದವರೇ ಆದ ಸೂಪರ್ ಸ್ಟಾರ್ ರಜನಿಕಾಂತ್, ಮತ್ತೆ ಕನ್ನಡ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಇದೀಗ ಫುಲ್ ವೈರಲ್ ಆಗುತ್ತಿದೆ. ಹೊಂಬಾಳೆ ಫಿಲಂಸ್ ರಜನಿಕಾಂತ್'ಗೆ ಸಿನಿಮಾ ಮಾಡಲು ತೆರೆ ಮರೆಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ರೀತಿಯ ಗುಟ್ಟಾದ ಮಾಹಿತಿ ಸಿಕ್ಕಿದೆ. ನಿರ್ಮಾಪಕರ ವಿಜಯ್ ಕಿರಗಂದೂರ್ ಅವರ ಕನಸು ಬಲು ದೊಡ್ಡದು. ಅವರ ಕನಸು ಇದಾಗಿದ್ದು ಪ್ಯಾನ್ ಇಂಡಿಯಾ ಲೆವೆಲ್'ನಲ್ಲಿ ರಜನಿ ಜೊತೆ ಸಿನಿಮಾ ಮಾಡೊ ಆಸೆಯನ್ನು ಅವರು ಈಗಾಗಲೇ ರಜನಿ ಬಳಿ ಹೇಳಿದ್ದು, ರಜನಿಕಾಂತ್ ಬಹಳ ಪಾಸಿಟಿವ್ ಆಗಿ ಮಾತನಾಡಿದ್ದಾರೆ ಎನ್ನಲಾಗಿದೆ.