Asianet Suvarna News Asianet Suvarna News

Rana Daggubati: ಪುನೀತ್ ಪುತ್ಥಳಿ ಇಟ್ಟು ಅಪ್ಪಿಕೊಂಡ ರಾಣಾ ದಗ್ಗುಬಾಟಿ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್‌ ಡಾ. ಪುನೀತ್ ರಾಜ್‌ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ, ಅವರ ನೆನಪು ಒಂದು ವರ್ಷವಾದರೂ ಯಾರಲ್ಲೂ ಮಾಸಿಲ್ಲ. ಈಗಲೂ ಅವರ ಅಗಲಿಕೆಯ ನೋವಿನಿಂದ ಯಾರಿಗೂ ಹೊರಬರಲು ಸಾಧ್ಯವಾಗುತ್ತಿಲ್ಲ. 

Oct 6, 2022, 12:51 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್‌ ಡಾ. ಪುನೀತ್ ರಾಜ್‌ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ, ಅವರ ನೆನಪು ಒಂದು ವರ್ಷವಾದರೂ ಯಾರಲ್ಲೂ ಮಾಸಿಲ್ಲ. ಈಗಲೂ ಅವರ ಅಗಲಿಕೆಯ ನೋವಿನಿಂದ ಯಾರಿಗೂ ಹೊರಬರಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ, ಹೊರರಾಜ್ಯದಲ್ಲೂ ಅಪ್ಪು ನೆನೆದು ಈಗಲೂ ಜನರು ಕಣ್ಣೀರು ಇಡುತ್ತಲೇ ಇದ್ದಾರೆ. ಸದ್ಯ ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಅವರು ಪುನೀತ್ ಕುರಿತು ಹಾಕಿರುವ ಒಂದು ಪೋಸ್ಟ್ ಹಲವರನ್ನು ಭಾವುಕರನ್ನಾಗಿಸಿದೆ. ರಾಣಾ ಅವರು ತಮ್ಮ ಆಫೀಸ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಯನ್ನು ಇಟ್ಟುಕೊಂಡಿದ್ದಾರೆ. ಹೌದು! ತಮ್ಮ ಆಫೀಸ್‌ನಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಯ ಒಂದು ಫೋಟೋವನ್ನು ಕ್ಲಿಕ್ ಮಾಡಿ, ಟ್ವೀಟ್ ಮಾಡಿರುವ ರಾಣಾ ದಗ್ಗುಬಾಟಿ ಅವರು, 'ತುಂಬ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂತು. ಮಿಸ್ ಯೂ ಮೈ ಫ್ರೆಂಡ್ ಪುನೀತ್ ರಾಜ್‌ಮಾರ್..' ಎಂದು ಬರೆದುಕೊಂಡಿದ್ದಾರೆ. ಇನ್ನು ಪುನೀತ್ ರಾಜ್‌ಕುಮಾರ್ ಮೇಲೆ ರಾಣಾ ದಗ್ಗುಬಾಟಿ ಇಟ್ಟಿರುವ ಪ್ರೀತಿ ಕಂಡು ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment