ಲೇಡಿ ಸೂಪರ್‌ಸ್ಟಾರ್ ಮಕ್ಕಳನ್ನು ನೋಡುವ ಭಾಗ್ಯ ಅಭಿಮಾನಿಗಳಿಗಿಲ್ಲ...

ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ದಂಪತಿ ಅವಳಿ ಮಕ್ಕಳ ಮುಖ ನೋಡುವ ಭಾಗ್ಯ ಇನ್ನು ಅಭಿಮಾನಿಗಳಿಗೆ ಸಿಗಲಿಲ್ಲ, 

First Published Mar 12, 2023, 5:02 PM IST | Last Updated Mar 12, 2023, 5:02 PM IST

ನಯನತಾರಾ ಅವಳಿ ಮಕ್ಕಳು ಹುಟ್ಟಿದ ತಕ್ಷಣ ಫೋಟೋ ಶೇರ್​ ಮಾಡಿಕೊಂಡರು. ಆದರೆ  ಅವರು ಹಂಚಿಕೊಂಡಿರುವ ಫೋಟೋದಲ್ಲಿ ಮಕ್ಕಳ ಮುಖ ತೋರಿಸಿರಲಿಲ್ಲ. ತಮ್ಮ ಅವಳಿ ಮಕ್ಕಳ ಪಾದಕ್ಕೆ ಪತಿ-ಪತ್ನಿ ಮುತ್ತಿಡುತ್ತಿರುವ ಕ್ಷಣ ಈ ಫೋಟೋದಲ್ಲಿ ಸೆರೆ ಆಗಿದೆ.  ಆದರೆ ಇದುವರೆಗೆ ಮಕ್ಕಳ ಮುಖವನ್ನು ದಂಪತಿ ರಿವೀಲ್​ ಮಾಡಲಿಲ್ಲ. ಮಕ್ಕಳ ಮುಖವನ್ನು ನೋಡಲು ಅಭಿಮಾನಿಗಳು ಕಾತರರಾಗಿರುವ ನಡುವೆಯೇ ದಂಪತಿ ಮಕ್ಕಳನ್ನು ಕರೆದುಕೊಂಡು ರಸ್ತೆಗೆ ಬಂದಿದ್ದಾರೆ. ಈಗಲಾದರೂ ಮಕ್ಕಳ ಮುಖವನ್ನು ನೋಡಬಹುದೇ ಎಂದು ಕಾತರರಾಗಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಇದಕ್ಕೆ  ಕಾರಣ, ಮುಖ ಮುಚ್ಚಿಕೊಂಡು ಅವಳಿ ಮಕ್ಕಳನ್ನು ಎತ್ತುಕೊಂಡು ಈ ದಂಪತಿ ಬಂದಿದ್ದಾರೆ. ಅಲ್ಲಿದ್ದವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ದಂಪತಿ ಸ್ಮೈಲ್​ ಮಾಡಿದ್ದಾರೆ ಬಿಟ್ಟರೆ ಮಕ್ಕಳ ಮುಖವನ್ನು ತೋರಿಸಲೇ ಇಲ್ಲ. ನಯನತಾರಾ ಒಂದು ಮಗುವನ್ನು ಹಾಗೂ ವಿಘ್ನೇಶ್ ಇನ್ನೊಂದು ಮಗುವನ್ನು ಹಿಡಿದುಕೊಂಡು ಮಕ್ಕಳ ಮುಖ ಯಾವುದೇ ಕಾರಣಕ್ಕೂ ಕಾಣಬಾರದು ಎಂದು ಬಿಗಿಯಾಗಿ ಅಪ್ಪಿಕೊಂಡು ಹೋಗಿದ್ದಾರೆ.