ಚುನಾವಣಾ ರಣಕಣದಲ್ಲಿ ಕಿಚ್ಚನ ಕಿಚ್ಚು ಯಾವಾಗ...
ನಟ ಸುದೀಪ್ ಕೆಲವು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ಚುನಾವಣಾ ಅಭಿಯಾನದ ಮೂಲಕ ಮತದಾರರನ್ನು ಸೆಳೆಯಲಿದ್ದಾರೆ. 10 ದಿನಗಳ ಕಾಲ ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಪ್ರಚಾರ ಮಾಡಲಿದ್ದಾರೆ.
ನಟ ಸುದೀಪ್ ಕೆಲವು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ಚುನಾವಣಾ ಅಭಿಯಾನದ ಮೂಲಕ ಮತದಾರರನ್ನು ಸೆಳೆಯಲಿದ್ದಾರೆ. 10 ದಿನಗಳ ಕಾಲ ಬಿಜೆಪಿ ಅಭ್ಯರ್ಥಿಗಳ ಪರ ಕಿಚ್ಚ ಪ್ರಚಾರ ಮಾಡಲಿದ್ದಾರೆ.ಇದೇ ಏಪ್ರಿಲ್ 20ರಿಂದ ಸುದೀಪ್ ಬಹಿರಂಗ ಪ್ರಚಾರದ ಪ್ರದರ್ಶನ ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿ ಕೂಡ ಆಗಿದೆ. ಸಧ್ಯಕ್ಕೆ ಬಿಜೆಪಿ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಕಿಚ್ಚ ಸುದೀಪ್ ಬಸವರಾಜ್ ಬೊಮ್ಮಾಯಿ, ಸತೀಶ್ ರೆಡ್ಡಿ, ರಾಜುಗೌಡ, ಮುನಿರತ್ನ, ಹಾಗು ಚಿತ್ರದುರ್ಗ ಜಿಲ್ಲೆಯ ಇಬ್ಬರ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಅಷ್ಟೆ ಅಲ್ಲ ಸಿನಿಮಾ ಕ್ರೇಜ್ ಇರೋ ಕ್ಷೇತ್ರಗಳಲ್ಲೂ ಸುದೀಪ್ ಸಂಚಾರ ಮಾಡಲಿದ್ದಾರಂತೆ. ನಟಿಸಿರುವ ಜಾಹೀರಾತು, ಸಿನಿಮಾಗಳ ಪ್ರಸಾರಕ್ಕೆ ನಿಷೇಧ ಹೇರಬೇಕು ಎಂಬ ಜೆಡಿಎಸ್ ಮನವಿಯನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ.