ಮಾರ್ಕ್ ಆ್ಯಂಟನಿ ಶೂಟಿಂಗ್ ವೇಳೆ ಅವಘಡ: ತಮಿಳು ನಟ ವಿಶಾಲ್ ಅಪಾಯದಿಂದ ಪಾರು

'ಮಾರ್ಕ್ ಆಂಟೋನಿ' ಸಿನಿಮಾ ಸೆಟ್​ನಲ್ಲಿ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ತಮಿಳು ನಟ ವಿಶಾಲ್ ಪಾರಾಗಿದ್ದಾರೆ.

Share this Video
  • FB
  • Linkdin
  • Whatsapp

'ಮಾರ್ಕ್ ಆಂಟೋನಿ' ಸಿನಿಮಾ ಶೂಟಿಂಗ್ ವೇಳೆ ದೊಡ್ಡ ಅವಘಡ ನಡೆದಿದ್ದು, ನಟ ವಿಶಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆ್ಯಕ್ಷನ್ ದೃಶ್ಯದ ಚಿತ್ರೀಕರಣ ಮಾಡುವಾಗ ಟ್ರಕ್ ಒಂದು ಎಂಟಿ ಕೊಡುತ್ತೆ. ಚಾಲಕನಿಗೆ ಟ್ರಕ್ ನಿಲ್ಲಿಸಲಾಗದೇ ವಿಶಾಲ್ ಪಕ್ಕದಲ್ಲೇ ಹರಿದಿದೆ. ತಕ್ಷಣ ಅಲ್ಲಿದ್ದವರು ವಿಶಾಲ್ ಅವರನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ಈ ವಿಡಿಯೋವನ್ನ ಹಂಚಿಕೊಂಡು ದೊಡ್ಡ ಅವಘಡದಿಂದ ಸ್ವಲ್ಪದರಲ್ಲೇ ಪಾರಾದೆ ಎಂದು ನಟ ವಿಶಾಲ್ ಟ್ವೀಟ್ ಮಾಡಿದ್ದಾರೆ.

Related Video