ಒಬ್ಬಂಟಿ ಸಮಂತಾಗೆ ಸಿಕ್ಕೇಬಿಟ್ನಾ ಗೆಳೆಯ? ವಿವಾಹಿತ ನಿರ್ದೇಶಕನ ಜೊತೆ 2ನೇ ಅಧ್ಯಾಯ?

ನಟಿ ಸಮಂತಾ ಅವರಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ ಎಂಬ ವದಂತಿಗಳು ಹರಿದಾಡುತ್ತಿವೆ. ಒಂದು ಸಂದರ್ಶನದಲ್ಲಿ ಸಮಂತಾ ಅವರಿಗೆ ಬಂದ ವಾಟ್ಸಾಪ್ ಸಂದೇಶದಿಂದ ಈ ವದಂತಿ ಹುಟ್ಟಿಕೊಂಡಿದೆ. ಈ ಸಂದೇಶ ಯುವ ನಿರ್ದೇಶಕ ರಾಜ್ ಅವರಿಂದ ಬಂದಿತ್ತು ಎನ್ನಲಾಗಿದೆ.

Share this Video
  • FB
  • Linkdin
  • Whatsapp

ನಟಿ ಸಮಂತಾ ವಿಚ್ಛೆಧನ ಪಡೆದಿದ್ದು, ನಾಗ ಚೈತನ್ಯ ಮತ್ತೊಂದ್ ಮದುವೆ ಆಗಿದ್ದು ಎಲ್ಲವೂ ಈಗ ಹಳೆಯ ಎಪಿಸೋಡ್ ಗಳು. ಸಮಂತಾ ಸಿನಿಮಾ, ವೆಬ್ ಸೀರೀಸ್ ಅಂತ ಬ್ಯುಸಿಯಾಗಿದ್ದಾರೆ. ಆದ್ರೆ ಸ್ಯಾಮ್ ಒಬ್ಬಂಟಿಯಾಗಿರೋದು ಅಭಿಮಾನಿಗಳಿಗೂ ಇಷ್ಟ ಇಲ್ಲ. ಖುದ್ದು ಸಮಂತಾಗೂ ಏಕಾಂತ ಒಪ್ತಾ ಇಲ್ಲ. ಸೋ ಸದ್ಯ ಸಿನಿಲೋಕದಲ್ಲಿ ಹರಿದಾಡ್ತಿರೋ ವದಂತಿ ಪ್ರಕಾರ ಸಮಂತಾ ಒಂಟಿಯಲ್ಲ... ಸ್ಯಾಮ್​ಗೊಬ್ಬ ಗೆಳೆಯ ಸಿಕ್ಕಿಬಿಟ್ಟಿದ್ದಾನೆ.ಸ್ಯಾಮ್ ಬದುಕಲ್ಲಿ ಚೈತು ಮುಗಿದುಹೋದ ಅಧ್ಯಾಯ. ಸೋ ಇನ್ಮುಂದೆ ಸ್ಯಾಮ್ ಕೂಡ ಹೊಸ ಪಾರ್ಟನರ್​ ಹುಡುಕಿಕೊಳ್ಳಲಿ ಮೂವ್ ಆನ್ ಆಗಲಿ ಅಂತ ಈಕೆಯ ಫ್ಯಾನ್ಸ್ ಕೇಳಿಕೊಳ್ತಾನೇ ಇದ್ರು. ಖುದ್ದು ಸಮಂತಾ ಕೂಡ ನಾನು ಒಬ್ಬಂಟಿಯಾಗಿರಲಾರೆ.. ನನಗೂ ಒಬ್ಬ ಗೆಳೆಯ ಬೇಕು ಅಂತ ಹೇಳಿಕೊಂಡಿದ್ರು.ಇದೀಗ ಸಮಂತಾಗೆ ಹೊಸ ಗೆಳೆಯ ಸಿಕ್ಕಾಗಿದೆ ಅನ್ನೋ ಸುದ್ದಿ ಸಿನಿದುನಿಯಾದಲ್ಲಿ ಸದ್ದು ಮಾಡ್ತಾ ಇದೆ. ಇತ್ತೀಚಿಗೆ ಸಮಂತಾ ಒಂದು ಇಂಟರ್​ವ್ಯೂನಲ್ಲಿ ಭಾಗಿಯಾಗಿದ್ರು. ಸಂದರ್ಶನದ ಮಧ್ಯೆ ಸಮಂತಾ ವಾಟ್ಸ್​ಆಪ್​ಗೆ ಸಂದೇಶವೊಂದು ಬಂತಂತೆ. ಅದೂ ಆಡಿಯೋ ಸಂದೇಶ. ಆ ಆಡಿಯೋ ಸಂದೇಶವನ್ನ, ಸಂದರ್ಶನದ ನಡುವೆಯೇ ಸಮಂತಾ ಓಪನ್ ಮಾಡಿ ಕೇಳಿಸಿಕೊಂಡಿದ್ದಾರೆ. ಆ ಬಳಿಕ ಅವರ ಮುಖ ಚಹರೆಯೇ ಬದಲಾಯ್ತಂತೆ. ಸಂದೇಶ ಕೇಳಿಸಿಕೊಂಡ ಬಳಿಕ ನಟಿ ನಾಚಿ ನೀರಾದರಂತೆ. ಆ ಬಳಿಕ ಇನ್ನಷ್ಟು ಉತ್ಸಾಹದಿಂದ ಸಂದರ್ಶನ ಮುಂದುವರೆಸಿದರಂತೆ. ಅಲ್ಲೇ ಇದ್ದವರ ಪ್ರಕಾರ ಆ ಸಂದೇಶ ಒಬ್ಬ ಯುವ ನಿರ್ದೇಶಕನದ್ದು. ಆ ಯುವ ನಿರ್ದೇಶಕ ಬೇರ್ಯಾರು ಅಲ್ಲ ದಿ ಫ್ಯಾಮಿಲಿ ಮ್ಯಾನ್ ಡೈರೆಕ್ಟರ್ ರಾಜ್.

ಪುನೀತ್ ರಾಜ್‌ಕುಮಾರ್ ನಟನೆಯ ಈ 9 ಸಿನಿಮಾ ನೋಡಲೇ ಬೇಕು; ಮಿಸ್ ಮಾಡ್ಬೇಡಿ ಆಯ್ತಾ?

Related Video