ಕಾಂತಾರಾ ಧಣಿಗಳ 'ಹೆರಿಟೇಜ್ ಅರಮನೆ' ಎಲ್ಲಿದೆ ಗೊತ್ತಾ?

ಕಾಂತಾರಾ ಚಿತ್ರದಲ್ಲಿ ಬರುವ ಧಣಿಗಳ ಮನೆ ಒಂದು ಸುಂದರ ಪಾರಂಪರಿಕ ಕಟ್ಟಡ. ಇದು ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿದೆ.
 

First Published Oct 25, 2022, 12:40 PM IST | Last Updated Oct 25, 2022, 1:29 PM IST

ಇಲ್ಲಿನ ಸಾಯಿರಾದ  ಹೆರಿಟೇಜ್'ನಲ್ಲಿರುವ ಈ ಪಾರಂಪರಿಕ ಕಟ್ಟಡ ಸದ್ಯ ಜನಾಕರ್ಷಣೆಗೆ ಪಾತ್ರವಾಗಿದ್ದು, ಸಾಯಿರಾದ ಹೆರಿಟೇಜ್'ನಲ್ಲಿ ಈ ಕಟ್ಟಡ ನಿರ್ಮಾಣಗೊಂಡು 13 ವರ್ಷ ಕಳೆದಿದೆ. ಇದು ಎರಡು ಅಪೂರ್ವ ಕಟ್ಟಡಗಳ ಅಪರೂಪದ ಸಂಯೋಜನೆಯಾಗಿದ್ದು, ಉಡುಪಿಯಲ್ಲಿದ್ದ ಬ್ರಿಟಿಷ್ ಕೊಲೋನಿಯಲ್ ಹೌಸ್ ಮತ್ತು ಶಿರಸಿಯ ಬ್ರಾಹ್ಮಣರ ಮನೆಗಳನ್ನು ಆಯಾ ಸ್ಥಳದಿಂದ ಕಿತ್ತು ಇಲ್ಲಿ ಮತ್ತೆ ಮರುಜೋಡಿಸಲಾಗಿದೆ. ಉಡುಪಿಯಿಂದಲೇ ಬಂದಿರುವ ರಿಷಬ್ ಶೆಟ್ಟಿಗೆ ಈ ಮೊದಲೇ ಸಾಯಿರಾದ ಹೆರಿಟೇಜ್ ಕಟ್ಟಡದ ಪರಿಚಯವಿತ್ತು. ಹಾಗಾಗಿ ಅನಾಯಾಸವಾಗಿ ಕೇವಲ ಐದಾರು ದಿನಗಳಲ್ಲಿ ಚಿತ್ರಕ್ಕೆ ಬೇಕಾದ ಅದ್ಭುತ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗಿದೆ.

'ಕಿರಿಕ್ ಪಾರ್ಟಿ' ಪ್ರೊಡಕ್ಷನ್ ಹೌಸ್ ಹೆಸರೇಳಲು ಹಿಂಜರಿದ ರಶ್ಮಿಕಾ; ಕೃತಜ್ಞತೆ ಇಲ್ಲದವಳೆಂದು ಹಿಗ್ಗಾಮುಗ್ಗ ಟ್ರೋಲ್