ಕೂಲಿ ಸಿನಿಟೀಮ್​​ನ ವಿನೂತನ ಪ್ರಮೋಷನ್: ಮನೆ ಮನೆಗೆ ಬರಲಿದೆ ತಲೈವಾ ಸಿನಿಮಾ ಪೋಸ್ಟರ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಮೂವಿ ತೆರೆಗೆ ಬರೋದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಎಲ್ಲಾ ಭಾಷೆಯ ಸ್ಟಾರ್ಸ್ ನಟಿಸಿರೋ ಈ ಮಲ್ಟಿಸ್ಟಾರರ್ ಮೂವಿಗೇ ಪ್ರಮೋಷನ್ನೇ ಬೇಕಾಗಿಲ್ಲ.

Share this Video
  • FB
  • Linkdin
  • Whatsapp

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಮೂವಿ ತೆರೆಗೆ ಬರೋದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಎಲ್ಲಾ ಭಾಷೆಯ ಸ್ಟಾರ್ಸ್ ನಟಿಸಿರೋ ಈ ಮಲ್ಟಿಸ್ಟಾರರ್ ಮೂವಿಗೇ ಪ್ರಮೋಷನ್ನೇ ಬೇಕಾಗಿಲ್ಲ. ಆದ್ರೂ ಕೂಲಿ ಟೀಂ ಭರ್ಜರಿ ಪ್ರಮೋಷನ್ ಮಾಡ್ತಾ ಇದೆ. ಅದ್ರಲ್ಲೂ ಹೊಸ ಹೊಸ ಟೆಕ್ನಿಕ್ ಬಳಸಿ ಪ್ರಚಾರ ಮಾಡ್ತಾ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ , ಲೊಕೇಶ್ ಕನಗರಾಜ್ ನಿರ್ದೇಶನದ ಕೂಲಿ ಮೂವಿ ರಿಲೀಸ್​ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಆಗಸ್ಟ್ 14ಕ್ಕೆ ಕೂಲಿ ಸಿನಿಮಾ ವರ್ಲ್ಟ್ ವೈಡ್ ತೆರೆಗೆ ಬರ್ತಾ ಇದೆ. ಈ ಸಿನಿಮಾದಲ್ಲಿ ತಲೈವಾ ಜೊತೆಗೆ ನಮ್ಮ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ತೆಲುಗಿನ ಕಿಂಗ್ ನಾಗಾರ್ಜುನ್, ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಕೂಡ ನಟನೆ ಮಾಡಿದ್ದಾರೆ.

ಇಷ್ಟು ದೊಡ್ಡ ಮಲ್ಟಿಸ್ಟಾರರ್ ಮೂವಿಗೆ ಪ್ರಚಾರವಾದ್ರೂ ಯಾಕ್ ಬೇಕೂ, ಈ ಸ್ಟಾರ್​ಗಳ ಹೆಸರೇ ಸಾಕು ಅಲ್ವಾ.. ಆದ್ರೆ ಹೀಗಂದುಕೊಂಡು ಕೂಲಿ ಟೀಂ ಸುಮ್ಮನಾಗಿಲ್ಲ. ಸಿನಿಮಾಗೆ ಭರ್ಜರಿ ಮಾಡ್ತಾ ಇದೆ. ಅದ್ರಲ್ಲೂ ಅಮೇಜಾನ್ ಜೊತೆಗೆ ಕೈ ಜೋಡಿಸಿ ವಿನೂತನ ಪ್ರಚಾರಕ್ಕೆ ಸಿದ್ದವಾಗಿದೆ. ಅಮೇಜಾನ್​ನಿಂದ ತರಿಸುವ ಪಾರ್ಸೆಸ್​ಗಳ ಕವರ್ ಮೇಲೆ ಕೂಲಿ ಪೋಸ್ಟರ್ಸ್ ಪ್ರಿಂಟ್ ಹಾಕಿದ್ದು, ಇನ್ಮುಂದೆ ಅಮೇಜಾನ್​ನಿಂದ ಆರ್ಡರ್ ಮಾಡಿದವರ ಮನೆಗೆ ಕೂಲಿ ಪೋಸ್ಟರ್ ಬರಲಿವೆ. ಈ ಹಿಂದೆ ರಜನಿಕಾಂತ್ ನಟನೆಯ ಕಬಾಲಿ ಪೋಸ್ಟರ್​​ನ ಫ್ಲೈಟ್​​ಗಳ ಪ್ರಿಂಟ್ ಮಾಡಿಸಿದ್ದು, ಸಖತ್ ಸದ್ದು ಮಾಡಿತ್ತು. ಈ ಅಮೇಜಾನ್ ಬಳಸಿಕೊಂಡು ಹೊಸತರ ಸಿನಿಮಾ ಪ್ರಚಾರ ಮಾಡ್ತಾ ಇದೆ ಕೂಲಿ ಟೀಂ. ಒಟ್ಟಾರೆ ತಲೈವಾ ಸಿನಿಮಾ ಎಷ್ಟು ಡಿಫರೆಂಟೋ ಅವರ ಸಿನಿಮಾ ಪ್ರಮೋಷನ್ಸ್ ಕೂಡ ಅಷ್ಟೇ ಡಿಫರೆಂಟು.

Related Video