Asianet Suvarna News Asianet Suvarna News

ಆಂಧ್ರ ಎಲೆಕ್ಷನ್​​ ಬಳಿಕ ಟಾಲಿವುಡ್​​ನಲ್ಲಿ ಸ್ಟಾರ್ಸ್​​​ಗಳ ವಿವಾದ: ಅಲ್ಲು ಅರ್ಜುನ್​ ವಿರುದ್ಧ ಹೆಚ್ಚಾಯ್ತು ಕೋಪ!

ಮೆಗಾ ಸ್ಟಾರ್ ಫ್ಯಾಮಿಲಿಯ ಸದಸ್ಯ ಆಗಿರೋ ನಟ ಅಲ್ಲು ಅರ್ಜುನ್ ಮಾತ್ರ ಪವನ್ ಕಲ್ಯಾಣ್​​ರ ವಿರೋಧಿ ಬಣ ವೈಎಸ್​ಆರ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿಗೆ ಪರ ಪ್ರಚಾರ ಮಾಡಿದ್ರು. ಇದು ಮೆಗಾಸ್ಟಾರ್ ಅಭಿಮಾನಿಗಳು ಹಾಗೂ ಜನಸೇನಾ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. 

ಆಂಧ್ರದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಮುಗಿದಿದೆ. ತೆಲುಗು ಸಿನಿಮಾ ಜಗತ್ತಿನ ಟಾಪ್​ ಸ್ಟಾರ್ಸ್​​ಗಳು ತಮಗೆ ಬೇಕಾದವರ ಪರ ಪ್ರಚಾರ ಮಾಡಿ ತಮ್ಮ ಅಭಿಮಾನಿಗಳಿಂದ ಓಟ್ ಮಾಡಿಸಿದ್ದಾರೆ. ಅಷ್ಟೆ ಅಲ್ಲ ಅವರೂ ಕೂಡ ಮತದಾನ ಮಾಡಿದ್ದು ರಿಸಲ್ಟ್​ ಬರಲಿ ಅಂತ ವೇಟಿಂಗ್​ನಲ್ಲಿದ್ದಾರೆ. ಆದ್ರೆ ಮತದಾನ ಮುಗಿದ ಮೇಲೂ ಆಂಧ್ರ ಚಿತ್ರ ಜಗತ್ತಿನಲ್ಲಿ ಎಲೆಕ್ಷನ್​ ವಿವಾದದ ಬೆಂಕಿ ಹೊತ್ತಿಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೀಗಿದ್ದ ಅಲ್ಲು ಅರ್ಜುನ್​​ ವಿರುದ್ಧ ಆರೋಪಗಳು ಶುರುವಾಗಿವೆ. ಈ ಭಾರಿ ಆಂಧ್ರ ಎಲೆಕ್ಷನ್​​ನಲ್ಲಿ ನಟ ಪವನ್ ಕಲ್ಯಾಣ್​ರ ಜನಸೇತಾ ಪಾರ್ಟಿ ಅಬ್ಬರದ ಪ್ರಚಾರ ಮಾಡಿತ್ತು. ನಟ ಪವನ್ ಕಲ್ಯಾಣ್​​ ಗೆಲ್ಲಲಿ ಅಂತ ರಾಮ್ ಚರಣ್​, ಮಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವು ತೆಲುಗು ಕಲಾವಿಧರು ಆಂಧ್ರದ ತುಂಬೆಲ್ಲಾ ಪ್ರಚಾರ ಮಾಡಿದ್ರು. 

ಆದ್ರೆ ಅದೇ ಮೇಗಾ ಸ್ಟಾರ್ ಫ್ಯಾಮಿಲಿಯ ಸದಸ್ಯ ಆಗಿರೋ ನಟ ಅಲ್ಲು ಅರ್ಜುನ್ ಮಾತ್ರ ಪವನ್ ಕಲ್ಯಾಣ್​​ರ ವಿರೋಧಿ ಬಣ ವೈಎಸ್​ಆರ್ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಿಲ್ಪಾ ರವಿಚಂದ್ರ ರೆಡ್ಡಿಗೆ ಪರ ಪ್ರಚಾರ ಮಾಡಿದ್ರು. ಇದು ಮೆಗಾಸ್ಟಾರ್ ಅಭಿಮಾನಿಗಳು ಹಾಗೂ ಜನಸೇನಾ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಡೀ ಕುಟುಂಬ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದೆ. ಆದ್ರೆ ಅಲ್ಲು ಅರ್ಜುನ್ ಮಾತ್ರ ಪವನ್​ ಕಲ್ಯಾಣ್​ರ ಎದುರಾಳಿಗಳ ಪರ ಪ್ರಚಾರಕ್ಕೆ ಹೋಗಿದ್ದಾರೆ. ಇದೀಗ ಪವನ್ ಕಲ್ಯಾಣ್ ಹಾಗೂ ಚಿರಂಜೀವಿಯ ಸಹೋದರ ನಟ, ನಿರ್ಮಾಪಕ ನಾಗಬಾಬು ಟ್ವೀಟ್ ಒಂದನ್ನು ಮಾಡಿದ್ದು, ಪರೋಕ್ಷವಾಗಿ ಅಲ್ಲು ಅರ್ಜುನ್ ವಿರುದ್ಧ ಗುಡುಗಿದ್ದಾರೆ. 

‘ನಮ್ಮೊಡನೇ ಇದ್ದು ವಿರೋಧಿಗಳ ಪರವಾಗಿ ಕೆಲಸ ಮಾಡುವವನು ನಮ್ಮವನಾದರೂ ಪರಕೀಯನೆ. ನಮ್ಮೊಡನೆ ನಿಲ್ಲುವವನು ಬೇರೆಯವನಾದರೂ ನಮ್ಮವನೇ’ ಎಂದಿದ್ದಾರೆ ನಾಗಬಾಬು. ನಿರ್ಮಾಪಕ ನಾಗಬಾಬು ಟ್ವೀಟ್ ಮಾಡುತ್ತಿದ್ದಂತೆ, ನಟ ಅಲ್ಲು ಅರ್ಜುನ್ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಭಂಧಿಸಿದ ವ್ಯಕ್ತಿಯಲ್ಲ. ರಾಜಕೀಯ ಪಕ್ಷಗಳ ವಿಷಯದಲ್ಲಿ ನಾನು ತಟಸ್ಥ. ಚಿಕ್ಕಪ್ಪ ಪವನ್ ಕ್ಯಲ್ಯಾಣ್ ಪಕ್ಷವಾಗಲಿ, ಗೆಳೆಯ ಶಿಲ್ಪರವಿಚಂದ್ರನ್ ಆಗಲಿ ಹಾಗೂ ನನ್ನ ಮಾವ ಚಂದ್ರಶೇಖರ ರೆಡ್ಡಿಯವರೇ ಆಗಲಿ ಅವರ ಪಕ್ಷದೊಂದಿಗೆ ನನಗೆ ಸಂಬಂಧವಿಲ್ಲ. ಆದರೆ ನನ್ನ ಪ್ರೀತಿ ಪಾತ್ರರಿಗೆ ನಾನು ಬೆಂಬಲ ನೀಡುತ್ತೇನೆ.

ಅವರು ಯಾವ ಪಕ್ಷ ಎಂಬುದು ನನಗೆ ಮುಖ್ಯವಾಗುವುದಿಲ್ಲ’ ಅಲ್ಲದೆ ಪವನ್ ಕಲ್ಯಾಣ್ ಪರವಾಗಿ ನಾನು ಎಂದೆಂದೂ ಇರುತ್ತೇನೆ’ ಎಂದೂ ಅಲ್ಲು ಅರ್ಜುನ್ ಹೇಳಿದ್ದಾರೆ. ಮೆಗಾಸ್ಟಾರ್ ಕುಟುಂಬದ ಸದಸ್ಯ. ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಮುನಿಸಿಕೊಂಡಿದ್ದ ಸಮಯದಲ್ಲಿ ಅಲ್ಲು ಅರ್ಜುನ್ ನೇರವಾಗಿ ಚಿರಂಜೀವಿಗೆ ಬೆಂಬಲ ಸೂಚಿಸಿದ್ದರು. ಆ ನಂತರ ಎಲ್ಲ ಸರಿಹೋಯ್ತಾದರೂ ಚಿರಂಜೀವಿ ಕುಟುಂಬದ ಕೆಲವರೊಟ್ಟಿಗೆ ಅಲ್ಲು ಅರ್ಜುನ್ ಸಂಬಂಧ ಸರಿಯಿಲ್ಲವೆಂದೇ ಹೇಳಲಾಗಿತ್ತು. ಇದೀಗ ನಾಗಬಾಬು, ಟ್ವೀಟ್​ ಮಾಡುವ ಮೂಲಕ ಅಲ್ಲು ಅರ್ಜುನ್, ನಮ್ಮವನಾಗಿದ್ದರೂ ನಮ್ಮವನಲ್ಲ’ ಎಂದಿದ್ದಾರೆ. ಈ ಈ ಭಾರಿಯ ಚುನಾವಣೆಯಿಂದ ಶುರುವಾದ ಈ ಮೆಗಾ ಮನೆ ಜಗಳ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕು.