ಬಾಹುಬಲಿ, ಆರ್‌ಆರ್‌ಆರ್, ಸಲಾರ್ ರೆಕಾರ್ಡ್ ಬ್ರೇಕ್: 2024ರ ಬಿಗ್‌ ಬಜೆಟ್ ಸಿನಿಮಾ ಯಾವುದು ಗೊತ್ತಾ?

2024ರ ಹೊಸ ವರ್ಷಕ್ಕೆ ಬಂದಾಗಿದೆ. ಹೊಸ ವರ್ಷ ಅಂದ್ರೆ ಅದು ಬದಲಾವಣೆಯ ಮಹಾ ಪರ್ವ. ಈ ವರ್ಷ ಸಿನಿಮಾರಂಗದಲ್ಲೂ ಅಂತಹ ದೊಡ್ಡ ಬದಲಾವಣೆ ಆಗ್ತಿದೆ. ಅದು ಈ ವರ್ಷ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳ ಪರ್ವ ನಡೆಯತ್ತೆ. ಬಿಗ್ ಬಜೆಟ್ ಸಿನಿಮಾಗಳು ಅಂದ್ರೆ ನೆನಪಾಗೋದೇ ಬಾಹುಬಲಿ. 
 

First Published Jan 4, 2024, 1:37 PM IST | Last Updated Jan 4, 2024, 1:37 PM IST

2024ರ ಹೊಸ ವರ್ಷಕ್ಕೆ ಬಂದಾಗಿದೆ. ಹೊಸ ವರ್ಷ ಅಂದ್ರೆ ಅದು ಬದಲಾವಣೆಯ ಮಹಾ ಪರ್ವ. ಈ ವರ್ಷ ಸಿನಿಮಾರಂಗದಲ್ಲೂ ಅಂತಹ ದೊಡ್ಡ ಬದಲಾವಣೆ ಆಗ್ತಿದೆ. ಅದು ಈ ವರ್ಷ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳ ಪರ್ವ ನಡೆಯತ್ತೆ. ಬಿಗ್ ಬಜೆಟ್ ಸಿನಿಮಾಗಳು ಅಂದ್ರೆ ನೆನಪಾಗೋದೇ ಬಾಹುಬಲಿ. ಸಲಾರ್. ಆರ್ಆರ್ಆರ್ ಕೆಜಿಎಫ್2, ಬ್ರಹ್ಮಾಸ್ತ್ರ ಸಿನಿಮಾಗಳು. ಆದ್ರೆ 2024 ಭಾರತೀಯ ಚಿತ್ರರಂಗದಲ್ಲಿ ಮೆಗಾ ಬಜೆಟ್ ಸಿನಿಮಾಗಳ ಹಬ್ಬ ನಡೆಯಲಿದೆ. ಕಳೆದ ವರ್ಷ ಬಿಡುಗಡೆಯಾದ ಬಿಗ್ಬಜೆಟ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡುವಂತಹ ಮೂವಿಗಳು ಈ ವರ್ಷ ಬರುತ್ತಿವೆ. 

ಹಾಗಾದ್ರೆ 2024ರ ಬಿಗ್‌ ಬಜೆಟ್ ಸಿನಿಮಾ ಯಾವುದು..? ಅದೇ ಕಲ್ಕಿ. ಕಲ್ಕಿ.. ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಈ ಸಿನಿಮಾ ಸಧ್ಯ ಪ್ರಾಜೆಕ್ಟ್ ಕೆ ಹೆಸರಿನಲ್ಲಿ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ನಾಗ್ ಅಶ್ವಿನ್ ಕಲ್ಕಿ 2898 AD ಸಿನಿಮಾದ ನಿರ್ದೇಶಕರು. ಈ ಸಿನಿಮಾ ಬರೋಬ್ಬರಿ 600 ಕೋಟಿ ಬಂಡವಾಳದಲ್ಲಿ ನಿರ್ಮಾಣ ಆಗ್ತಿದೆ. ಕಲ್ಕಿ ಸಿನಿಮಾದ ಹೀರೋ ಟಾಲಿವುಡ್ನ ಡಾರ್ಲಿಂಗ್, ಸಧ್ಯ ಸಲಾರ್ ಹಿಡಿದು ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರೋ ಪ್ರಭಾಸ್. ಈ ಸಿನಿಮಾ 600 ಕೋಟಿ ಬಜೆಟ್ ನಲ್ಲಿ ಸಿದ್ಧವಾಗ್ತಿದೆ ಅಂತ ಸಿನಿಮಾ ಅನಲಿಸಿಸ್ಟ್ ಪಂಡಿತ ಮನೋಬಾಲಾ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. 

ಭಾರತೀಯ ಚಿತ್ರರಂಗದ ಆಲ್ ಟೈಂ ಬಿಗ್ ಬಜೆಟ್ ಸಿನಿಮಾಗಳಲ್ಲಿ ಸಲಾರ್ 270 ಕೋಟಿಯಲ್ಲಿ ಸಿದ್ಧವಾಗಿತ್ತು. ಬ್ರಹ್ಮಾಸ್ತ್ರ 400 ಕೋಟಿ ಆದ್ರೆ ಬಾಹುಬಲಿ 250 ಕೋಟಿಯಲ್ಲಿ ತಯಾರಾಗಿತ್ತು. ರಾಜಮೌಳಿಯ ಆರ್ಆರ್ಆರ್ ಸಿನಿಮಾ 550 ಕೋಟಿ ಬಜೆಟ್ನಲ್ಲಿ ತಯಾರಾಗಿ ಅತಿ ಹೆಚ್ಚು ಬಜೆಟ್ನ ಭಾರತೀಯ ಸಿನಿಮಾ ಆರ್ಆರ್ಆರ್ ಅನ್ನೋ ಹೆಗ್ಗಳಿಕೆ ಪಡೆದಿದೆ. ಆದ್ರೆ 600 ಕೋಟಿ ಬಜೆಟ್ನ ಕಲ್ಕಿ ಸಿನಿಮಾಗಿಂತಲೂ ಅತಿ ಹೆಚ್ಚು ಬಜೆಟ್ನ ಸಿನಿಮಾ ಒಂದಿದೆ. ಅದೇ ಪ್ರಭಾಸ್ ನಟನೆಯ ಆದಿಪುರುಷ್. ಈ ಸಿನಿಮಾ 700 ಕೋಟಿಯಲ್ಲಿ ಸಿದ್ಧವಾಗಿದೆ ಅಂತ ವಿಕ್ಕಿಪೀಡಿಯಾ ಹೇಳ್ತಿದೆ. ಆದ್ರೆ ಇದಕ್ಕೆ ಯಾವ್ದೇ ಪುರಾವೆ ಇಲ್ಲ. ಆದ್ರೆ 2024ರ ಅತಿ ಹೆಚ್ಚು ಬಜೆಟ್ನ ಸಿನಿಮಾ ಕಲ್ಕಿ ಅನ್ನೋದಂತು ಕನ್ಫರ್ಮ್. ಈ ಸಿನಿಮಾದ ವರ್ಕ್ ಕೂಡ ಆಗ್ಲು ಶುರುವಾಗಿದ್ದು, 2025ಕ್ಕೆ ಕಲ್ಕಿಯನ್ನ ತೆರೆ ಮೇಲೆ ತರೋ ಪ್ಲ್ಯಾನ್ ನಡೀತಿದೆ.