Avatar2: ವಿಶ್ವಾದ್ಯಂತ ಅವತಾರ್-2 ರಿಲೀಸ್: ಮೊದಲ ದಿನವೇ ಭರ್ಜರಿ ಓಪನಿಂಗ್

ವಿಶ್ವ ಚಿತ್ರರಂಗವನ್ನು ತನ್ನ ಕಲೆಕ್ಷನ್ ಮೂಲಕ ಅಲುಗಾಡಿಸಿದ್ದ ಅವತಾರ್ ಚಿತ್ರದ ಸೀಕ್ವೆಲ್ 'ಅವತಾರ್ ದ ವೇ ಆಫ್ ವಾಟರ್' ವಿಶ್ವದಾದ್ಯಂತ ಬಿಡುಗಡೆಗೊಂಡಿದೆ.

Share this Video
  • FB
  • Linkdin
  • Whatsapp

ಅವತಾರ್ -2 ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ಸುಮಾರು ಎರಡು ಸಾವಿರ ಕೋಟಿ ವೆಚ್ಚದಲ್ಲಿ ಈ ಚಿತ್ರ ತಯಾರಾಗಿದ್ದು, ಬಾಕ್ಸ್ ಆಫೀಸ್ ಬೇಟೆಗೆ ತಯಾರಾಗಿದೆ. ಇನ್ನು 2009ರಲ್ಲಿ ಬಿಡುಗಡೆಗೊಂಡು ಅವತಾರ್ ಮಾಡಿದ್ದ ಗಳಿಕೆಯನ್ನು ಇದುವರೆಗೂ ಯಾವ ಚಿತ್ರಕ್ಕೂ ಮುರಿಯಲಾಗಿಲ್ಲ. ಅಂತಹ ದೊಡ್ಡ ಕಲೆಕ್ಷನ್ ಮಾಡಿ ವಿಶ್ವ ಚಿತ್ರರಂಗದ ಬಾಸ್ ಎನಿಸಿಕೊಂಡಿರುವ ಅವತಾರ್ ಚಿತ್ರತಂಡದ ಮತ್ತೊಂದು ಸಿನಿಮಾ ಈಗಿನ ಟಿಕೆಟ್ ದರದಲ್ಲಿ ಮತ್ತೆಷ್ಟು ಗಳಿಸಬಹುದು ಎಂಬ ಕುತೂಹಲ ಹೆಚ್ಚಾಗಿದ್ದು, ಮೊದಲಿನ ಭಾಗದ ಹಾಗೆ ಈ ಚಿತ್ರವೂ ಅಬ್ಬರಿಸುವುದು ಖಚಿತ ಎನ್ನಲಾಗುತ್ತಿದೆ. ಇನ್ನು ತಿಂಗಳಿಗೂ ಮೊದಲೇ ಚಿತ್ರದ ಮುಂಗಡ ಬುಕಿಂಗ್ ಅನ್ನು ತೆರೆಯಲಾಗಿದ್ದು, ಸಿನಿ ರಸಿಕರು ಮುಗಿಬಿದ್ದು ಟಿಕೆಟ್‌ಗಳನ್ನು ಖರೀದಿಸಿದ್ದರು. ಅವತಾರ್ 2 ಇಂಗ್ಲಿಷ್ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗುತ್ತಿದ್ದು, ಜನರು ಈ ಭಾಷೆಯ ಅವತರಣಿಕೆಗಳ ಟಿಕೆಟ್‌ಗಳನ್ನೂ ಸಹ ಖರೀದಿಸುತ್ತಿದ್ದಾರೆ.

Related Video