Asianet Suvarna News Asianet Suvarna News

ಗಾಯಕಿ ಮಂಗ್ಲಿ ಮತ್ತೊಂದು ವಿವಾದ: ಕಾಳಹಸ್ತಿಯಲ್ಲಿ ದೇವರ ಮುಂದೆಯೇ ನೃತ್ಯ ಮಾಡಿ ವಿವಾದ!

ಈ ಶಿವರಾತ್ರಿ ದಿನದಂದೂ, ಅವರು ಹಾಡಿರುವ ಗೀತೆಯೊಂದು ರಿಲೀಸ್ ಆಗಿದೆ. ಅದೇ ಇದೀಗ ವಿವಾದಕ್ಕೆ ಕಾರಣವಾಗಿದೆ.  ಈ ಹಾಡು ದಕ್ಷಿಣದ ಕೈಲಾಸ ಎಂದೇ ಖ್ಯಾತಿಯಾಗಿರುವ ಶ್ರೀ ಕಾಳಹಸ್ತೀಶ್ವರಾಲಯದಲ್ಲಿ ಚಿತ್ರೀಕರಣವಾಗಿದ್ದು, ಮಂಗ್ಲಿ ದೇವಸ್ಥಾನದೊಳಗೆ ಕುಣಿದಿದ್ದಾರೆ.

First Published Feb 25, 2023, 11:44 AM IST | Last Updated Feb 25, 2023, 11:44 AM IST

ಗಾಯಕಿ ಮಂಗ್ಲಿ ಸೌತ್ ಸಿನಿ ದುನಿಯಾದಲ್ಲಿ ಸದ್ಯ ಸಿಕ್ಕಾಪಟ್ಟೆ ಜನಪ್ರಿಯ . ಹಾಗೆಯೆ. ಒಂದಿಲ್ಲೊಂದು ಕಾರಣದಿಂದಾಗಿ ಮಂಗ್ಲಿ ವಿವಾದಕ್ಕೀಡಾಗುತ್ತಿರುತ್ತಾರೆ. ಹಾಡಿನಲ್ಲಿ ಅವರು ಹೆಸರು ಎಷ್ಟು ಜನಪ್ರಿಯನೋ, ವಿವಾದದ ಕಾರಣದಿಂದಾಗಿಯೂ ಅಷ್ಟೇ ಫೇಮಸ್. ಇದೀಗ ಮಂಗ್ಲಿ ಹಾಡಿರುವ ಗೀತೆಯೊಂದು ವಿವಾದಕ್ಕೀಡಾಗಿದ್ದು, ಹಲವರು ಹಲವು ರೀತಿಯಲ್ಲಿ ಪ್ರಶ್ನೆ ಮಾಡುವಂತಾಗಿದೆ. ಅದರಲ್ಲೂ ಈ ಹಾಡನ್ನು ಶೂಟ್ ಮಾಡಿದವರ ವಿರುದ್ಧ ದೂರು ನೀಡುವಂತೆ ಆಗ್ರಹಿಸಲಾಗುತ್ತಿದೆ. ಮಂಗ್ಲಿ ಹಾಡು ವಿವಾದ ಎಬ್ಬಿಸೋಕೆ ಕಾರಣ ಇದೆ. ಪ್ರತಿ ಶಿವರಾತ್ರಿಯಂದು ಮಂಗ್ಲಿ ಹಾಡಿರುವ ಶಿವನ ಗೀತೆಯೊಂದು ಬಿಡುಗಡೆ ಆಗುತ್ತದೆ. 

ಅದನ್ನು ಅವರು ಸಂಪ್ರದಾಯ ಎನ್ನುವಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಶಿವರಾತ್ರಿ ದಿನದಂದೂ, ಅವರು ಹಾಡಿರುವ ಗೀತೆಯೊಂದು ರಿಲೀಸ್ ಆಗಿದೆ. ಅದೇ ಇದೀಗ ವಿವಾದಕ್ಕೆ ಕಾರಣವಾಗಿದೆ.  ಈ ಹಾಡು ದಕ್ಷಿಣದ ಕೈಲಾಸ ಎಂದೇ ಖ್ಯಾತಿಯಾಗಿರುವ ಶ್ರೀ ಕಾಳಹಸ್ತೀಶ್ವರಾಲಯದಲ್ಲಿ ಚಿತ್ರೀಕರಣವಾಗಿದ್ದು, ಮಂಗ್ಲಿ ದೇವಸ್ಥಾನದೊಳಗೆ ಕುಣಿದಿದ್ದಾರೆ. ಅದಕ್ಕೆ ಹೇಳೋದು ದೇವರ ವಿಚಾರದಲ್ಲಿ ಬಹಳ ಜಾಗರೂಕರಾಗಿರಬೇಕು ಎಂದು. ಶ್ರೀಕಾಳಹಸ್ತಿಯಲ್ಲಿ ಒಂದು ಸಂಪ್ರದಾಯವಿದೆ. ಪ್ರತಿ ದಿನ ಸಂಜೆ 6 ಗಂಟೆಗೆ ರಾಹುಕೇತು ಪೂಜೆ ಮುಗಿದ ನಂತರ ಮಂಟಪ ಮುಚ್ಚಲಾಗುತ್ತದೆ. ಆದರೆ, ಮಂಗ್ಲಿ ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ಮಂಟಪವನ್ನು ತೆರೆಯಲಾಗಿದೆ ಎನ್ನಲಾಗುತ್ತಿದೆ. 

ಅಲ್ಲದೇ, ದೇಗುಲದಲ್ಲಿ ಛಾಯಾಗ್ರಹಣಕ್ಕೆ ನಿರ್ಬಂಧವಿದ್ದರೂ, ಶೂಟಿಂಗ್‌ಗೆ ಅನುಮತಿ ಕೊಟ್ಟವರು ಯಾರು? ಎನ್ನುವ ಪ್ರಶ್ನೆ ಮೂಡಿದೆ. ಕಾಳಹಸ್ತಿ ಕಾಲಭೈರವ ದೇವಸ್ಥಾನದಲ್ಲಿ ಶೂಟ್ ಮಾಡಿರುವ ‘ಭಂ ಭಂ ಭೋಲೆ’ ಹಾಡು ರಿಲೀಸ್ ಆಗಿ ವೈರಲ್ ಕೂಡ ಆಗಿದೆ. ಸುದ್ದಲ ಅಶೋಕ್ ತೇಜ್ ಈ ಹಾಡನ್ನು ಬರೆದಿದ್ದು, ಕಾಲಭೈರವ ಸ್ವಾಮಿ ವಿಗ್ರಹದ ಮುಂದೆಯೇ ಮಂಗ್ಲಿ ನೃತ್ಯವನ್ನೂ ಮಾಡಿದ್ದಾರೆ. ಜೊತೆಗೆ ಮುಕ್ಕಂಟಿ ದೇವಸ್ಥಾನದಲ್ಲೂ ಸಹ ಮಂಗ್ಲಿ ಡಾನ್ಸ್ ಮಾಡಿದ್ದಾಳೆ. ಆ ಹಾಡೇ ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯ ಜನರೂ ದೇವಾಲಯ ಭಕ್ತರೂ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟವರಿಗೂ ಚಿತ್ರೀಕರಣ ಮಾಡಿದವರ ವಿರುದ್ಧವೂ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment