ರಾಕಿಭಾಯ್ ಯಶ್ ಅಡ್ಡಾದಲ್ಲಿ ಹಾಲಿವುಡ್ ಮಂದಿ: ಟಾಕ್ಸಿಕ್ ಅದ್ಭುತ ಅನುಭವ ಎಂದ ಅಮೆರಿಕನ್ ನಟ!

ಟಾಕ್ಸಿಕ್ ಅಡ್ಡದಲ್ಲಿ ವರ್ಕ್ ಮಾಡಿದ ಹಾಲಿವುಡ್ ಮಂದಿ ಯಶ್ ಮೂವಿನ ಕೊಂಡಾಡ್ತಾ ಇದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್​ನಲ್ಲೀ ಕೂಡ ನಿರ್ಮಾಣ ಆಗ್ತಾ ಇದೆ. ಹಲವು ಹಾಲಿವುಡ್ ನಟರು, ತಂತ್ರಜ್ಞರು ಸಿನಿಮಾಗೆ ಕೆಲಸ ಮಾಡ್ತಾ ಇದ್ದಾರೆ. ಟಾಕ್ಸಿಕ್ ಅಡ್ಡದಲ್ಲಿ ವರ್ಕ್ ಮಾಡಿದ ಹಾಲಿವುಡ್ ಮಂದಿ ಯಶ್ ಮೂವಿನ ಕೊಂಡಾಡ್ತಾ ಇದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದೆ. ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್​ನಲ್ಲೂ ರೆಡಿಯಾಗ್ತಾ ಇರೋ ಈ ಸಿನಿಮಾದಲ್ಲಿ ಹಲವು ಹಾಲಿವುಡ್ ನಟರು, ತಂತ್ರಜ್ಞರು ಕೂಡ ಕೆಲಸ ಮಾಡ್ತಾ ಇದ್ದಾರೆ. ಇತ್ತೀಚಿಗೆ ಈ ಸಿನಿಮಾಗೆ ಕೆಲಸ ಮಾಡಿದ್ದ ಹಾಲಿವುಡ್ ಸಾಹಸ ನಿರ್ದೇಶಕ ಜೆ ಜೆ ಪೆರ್ರಿ , ಟಾಕ್ಸಿಕ್ ಒಂದು ಅದ್ಭುತ ಸಿನಿಮಾ ಆಗುತ್ತೆ ಅಂದಿದ್ರು. ಯಶ್ ಅಂಡ್ ಟೀಂ ಜೊತೆಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿ ಈ ಸಿನಿಮಾಗೆ ಕೆಲಸ ಮಾಡಿದ್ದು ಅದ್ಭುತ ಅನುಭವ ಅಂದಿದ್ರು. 

ಮತ್ತೀಗ ಈ ಸಿನಿಮಾದಲ್ಲಿ ನಟಿಸಿರೋ ಅಮೇರಿಕನ್ ನಟ ಕೈಲ್ ಪೌಲ್ ಟಾಕ್ಸಿಕ್ ಬಗ್ಗೆ ಒಂದು ವಿಡಿಯೋ ಮಾಡಿ ತನ್ನ ಅನುಭವ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಚಿತ್ರದಲ್ಲಿ ಕನ್ನಡದಲ್ಲೇ ಡೈಲಾಗ್ ಹೇಳಿ ಥ್ರಿಲ್ ಆಗಿರೋ ಹಾಲಿವುಡ್ ನಟ ಬೆಳಗಿನ ಜಾವ 3ಗಂಟೆಗೆ ಒಂದು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾಗೆ ಯಶ್ ಒಡೆತನದ ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡ್ತಾ ಇವೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಌಕ್ಷನ್ ಕಟ್ ಹೇಳ್ತಾ ಇದ್ದು, ಚಿತ್ರದ ಕೆಲಸಗಳು ಭರದಿಂದ ನಡೀತಾ ಇವೆ. ವಿದೇಶಿ ಕಲಾವಿದರು - ತಂತ್ರಜ್ಞರು ಈ ಸಿನಿಮಾ ಬಗ್ಗೆ ಹೇಳೋದನ್ನ ಕೇಳ್ತಾ ಇದ್ರೆ ಟಾಕ್ಸಿಕ್ ಬಗ್ಗೆ ನಿರೀಕ್ಷೆ ಹೆಚ್ಚಾಗ್ತಾ ಇವೆ.

Related Video