ಪುಷ್ಪ ನಂತರ ಅಲ್ಲು ಅರ್ಜುನ್ ಬಂಧನದ ಹಿಂದಿನ ಗುಟ್ಟೇನು?

ತೆಲುಗು ಚಿತ್ರರಂಗದ ಸ್ಟಾರ್ ಅಲ್ಲು ಅರ್ಜುನ್ ಅವರ ಬಂಧನ, ನ್ಯಾಯಾಂಗ ಬಂಧನ ಮತ್ತು ಬಿಡುಗಡೆಯ ಹಿಂದಿನ ಕಾರಣವೇನು? ಪುಷ್ಪ 2 ಸಿನಿಮಾ ನಂತರ ಅಲ್ಲು ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ.

First Published Dec 16, 2024, 11:24 AM IST | Last Updated Dec 16, 2024, 11:33 AM IST

ಪುಷ್ಪ ದಿ ರೈಸ್ ತೆಲುಗು ಚಿತ್ರರಂಗದಲ್ಲಿ ಮೈಲುಗಲ್ಲು ನಿರ್ಮಿಸಿರೋ ಸಿನಿಮಾ.  ಈ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 21 ನಿಮಿಷ. ಆದ್ರೆ ಈ ಸಿನಿಮಾದ ಎರಡು ಷೋ ಮುಗಿಯೋ ಟೈಮಲ್ಲಿ, ಯಾರೂ ನಿರೀಕ್ಷಿಸೋಕೂ ಆಗದಂಥಾ ದೊಡ್ಡ ಘಟನೆಗಳೇ ನಡೆದುಬಿಟ್ಟಿವೆ, ಈ ಸಿನಿಮಾ ಹೀರೋ ಅಲ್ಲು ಅರ್ಜುನ್ ಅರೆಸ್ಟ್ ಆಗಿ, ಅವರಿಗೆ ನ್ಯಾಯಾಂಗ ಬಂಧನವಾಗಿ, ಕಡೆಗೆ ರಿಲೀಸೂ ಆಗೋಗಿದಾರೆ.. ಇದಿಷ್ಟೂ ಆಗಿದ್ದು, ಸಂಜೆಯಿಂದ ರಾತ್ರಿಯ ಗ್ಯಾಪ್ ಅಲ್ಲಿ.. ಅಷ್ಟಕ್ಕೂ ತೆಲುಗಿನ ಸಿನಿಮಾ ಸ್ಟಾರ್ ಜೈಲಿಗೆ ಹೋಗಿದ್ದೇಕೆ? ಪೊಲಿಟಿಕಲ್ ಸ್ಟಾರ್ ಸೇಡು ತೀರಿಸಿಕೊಳ್ತಿದ್ದಾರೆ ಅನ್ನೋ ಮಾತು ಬಂದಿದ್ದೇಕೆ? 

ಅದೊಂದು ವಿಚಿತ್ರ ರಾಜಕೀಯದ ಕತೆ. ಅಲ್ಲು ಅರೆಸ್ಟ್ ಬಂಧನ, ನ್ಯಾಯಾಂಗ ಬಂಧನ ಹಾಗೂ ಬಿಡುಗಡೆ ಅನ್ನೋ ಮೂರು ಘಟನೆಗಳು, ತೆಲಂಗಾಣ ಎಂದೆಂದೂ ಮರೆಯೋಕ್ಕಾಗದ ಹೊಸ ದಾಖಲೆ ನಿರ್ಮಿಸಿಬಿಟ್ಟಿದೆ.

ಪುಷ್ಪ ಅನ್ನೋ ಸಿನಿಮಾ ಮಾಡಿ ದೊಡ್ಡ ಸದ್ದು ಮಾಡಿದ್ದ ಅಲ್ಲು ಅರ್ಜುನ್, ಅದಕ್ಕಿಂತಾ ದೊಡ್ಡ ಸೌಂಡ್ ಮಾಡಿದ್ದು, ಅರೆಸ್ಟ್ ಆಗೋ ಮೂಲಕ.  ಅಷ್ಟಕ್ಕೂ ಅಲ್ಲು ಅರ್ಜುನ್ ಬಾಳಲ್ಲಿ ಆಗಿದ್ದೇನೇನು? ಅದಕ್ಕೆ ಕಾರಣವೇನೇನು?

ಪುಷ್ಪ 2 ಸಿನಿಮಾ ಮಾಡಿ, ರೆಕಾರ್ಡ್ ಮೇಲೆ ರೆಕಾರ್ಡ್ ನಿರ್ಮಿಸಿದ ಅಲ್ಲು ಅರ್ಜುನ್, ಈಗ ಸಂಕಷ್ಟದಲ್ಲಿದಾರೆ. ಕೆಲವರಂತೂ ಅವರ ಈ ಸ್ಥಿತಿಗೆ ಪುಷ್ಪ ಸಿನಿಮಾನೇ ಕಾರಣ ಅಂತಿದ್ದಾರೆ.