'ಪುಷ್ಪ 2' ಅಬ್ಬರಕ್ಕೆ ಹಳೆಯ ದಾಖಲೆ ಪುಡಿಪುಡಿ; ಶ್ರೀವಲ್ಲಿ-ಪುಷ್ಪರಾಜ್ ರಾಕಿಂಗ್!

ಪುಷ್ಪ-2 ಟೀಂ ಸಿನಿಮಾವನ್ನ ಅಚ್ಚು ಕಟ್ಟಾಗಿ ಮಾಡೋದ್ರ ಜೊತೆಗೆ ಭರ್ಜರಿಯಾಗಿ ಪ್ರಚಾರ ಕೂಡ ಮಾಡ್ತು. ದೇಶದ ಪ್ರಮುಖ ನಗರಗಳಲ್ಲಿ ಇವೆಂಟ್ ಮಾಡಿ, ಪ್ರೇಕ್ಷರನ್ನ ಸೆಳೆಯಿತು,. ಅದೆಲ್ಲವೂ ಸಿನಿಮಾದ ಬಾಕ್ಸ್ ಆಫೀಸ್ ಸಕ್ಸಸ್​​ಗೆ..

First Published Dec 6, 2024, 4:17 PM IST | Last Updated Dec 6, 2024, 5:40 PM IST

ಪ್ಯಾನ್ ಇಂಡಿಯಾದುದ್ದಕ್ಕೂ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ ಪುಷ್ಪ-2 ಸಿನಿಮಾ ವರ್ಲ್ಡ್  ವೈಡ್ ದಾಖಲೆ ಸ್ಕ್ರೀನ್ ಗಳಲ್ಲಿ ತೆರೆಗೆ ಬಂದಿದೆ. ರಶ್ಮಿಕಾ ಮಂದಣ್ಣ (Rashmika Mandanna) ಹಾಗು ಅಲ್ಲು ಅರ್ಜುನ್ (Allu Arjun) ಜೋಡಿಯ ಸಿನಿಮಾಗೆ ನಿರೀಕ್ಷೆಯಂತೆಯೇ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಅದ್ರಲ್ಲೂ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೇಗಿದೆ ಅಂದ್ರೆ ಸಿನಿಇಂಡಸ್ಟ್ರಿಯ ಹಳೆಯ ದಾಖಲೆಗಳೆಲ್ಲಾ ಧೂಳಿಪಟ ಆಗಿವೆ. ಮೊದಲ ದಿನವೇ ಪುಷ್ಪ-2 ಕಲೆಕ್ಟ್ ಮಾಡಿರೋದು ಭರ್ತಿ 270 ಕೋಟಿ. ಪುಷ್ಪ-2 ಬಾಕ್ಸಾಫೀಸ್ ರೆಕಾರ್ಡ್ಸ್​ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಪುಷ್ಪ-2 ಟೀಂ ಸಿನಿಮಾವನ್ನ ಅಚ್ಚು ಕಟ್ಟಾಗಿ ಮಾಡೋದ್ರ ಜೊತೆಗೆ ಭರ್ಜರಿಯಾಗಿ ಪ್ರಚಾರ ಕೂಡ ಮಾಡ್ತು. ದೇಶದ ಪ್ರಮುಖ ನಗರಗಳಲ್ಲಿ ಇವೆಂಟ್ ಮಾಡಿ, ಪ್ರೇಕ್ಷರನ್ನ ಸೆಳೆಯಿತು,. ಅದೆಲ್ಲವೂ ಸಿನಿಮಾದ ಬಾಕ್ಸ್ ಆಫೀಸ್ ಸಕ್ಸಸ್​​ಗೆ ಕಾರಣವಾಗಿದ್ದು ಸುಳ್ಳಲ್ಲ.

ಪುಷ್ಪ-2 ಒಂದು ಪಕ್ಕಾ ಮಸ್ ಮಸಾಲ ಸಿನಿಮಾ. ನಿರ್ದೇಶಕ ಸುಕುಮಾರ್ ಒಂದೊಂದು ದೃಶ್ಯಕ್ಕೂ ಶ್ರಮ ಹಾಕಿರೋದು ಕಣ್ಣಿಗೆ ಕಾಣಿಸುತ್ತೆ. ಅದ್ಭುತ ಕಲಾವಿದರು ಮತ್ತು ತಂತ್ರಜ್ಞರ ಸಮಾಗಮದ ಈ ಸಿನಿಮಾ ನಿರೀಕ್ಷೆಯಂತೆಯೇ ಮ್ಯಾಜಿಕ್ ಸೃಷ್ಟಿಮಾಡಿದೆ.

ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ರೆಕಾರ್ಡ್ ಮಾಡಿರೋ ಪುಷ್ಪ-2 ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆ ಮಾಡುತ್ತಾ./? ಅಥವಾ ಕಲೆಕ್ಷನ್ ಡಲ್ ಆಗುತ್ತಾ ಕಾದುನೋಬೇಕು.. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Video Top Stories