Asianet Suvarna News Asianet Suvarna News

ಮತ್ತೆ ಒಂದಾಗ್ತಾರಾ ಧನುಷ್- ಐಶ್ವರ್ಯಾ ಜೋಡಿ? ಫೋಟೋ ವೈರಲ್

ಅನೇಕ ತಿಂಗಳ ಬಳಿಕ ಧನುಷ್ ಮತ್ತು ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಧನುಷ್ - ಐಶ್ವರ್ಯಾ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

First Published Aug 24, 2022, 5:23 PM IST | Last Updated Aug 24, 2022, 5:23 PM IST

ಟಾಲಿವುಡ್ ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ದಂಪತಿ ದೂರ ದೂರ ಆಗಿ ಅನೇಕ ತಿಂಗಳಾಗಿದೆ. ರಜನಿಕಾಂತ್ ಅಳಿಯನ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ಟಾಲಿವುಡ್ ಸ್ಟಾರ್ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಬಳಿಕ ಧನುಷ್ ಮತ್ತು ಐಶ್ವರ್ಯಾ ಜೋಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.  ಧನುಷ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಅಭಿಮಾನಿಗೆ ಭಾರಿ ಬೇಸರ ಮೂಡಿಸಿತ್ತು. ಇಬ್ಬರು ಇನ್ಮುಂದೆ ಗಂಡ-ಹೆಂಡತಿ ಅಲ್ಲ ಮಕ್ಕಳಿಗೆ ಪೋಷಕರಾಗಿ ಇರುತ್ತೇವೆ ಅಂತ ಹೇಳಿದ್ದರು. ಇದೀಗ ಅನೇಕ ತಿಂಗಳ ಬಳಿಕ ಧನುಷ್ ಮತ್ತು ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಧನುಷ್ - ಐಶ್ವರ್ಯಾ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇಬ್ಬರೂ ಒಂದಾದ್ರಾ ಎನ್ನುತ್ತಿದ್ದಾರೆ. ಆದರೆ ಇಬ್ಬರು ಒಂದಾಗಿ ಫೋಟೋಗೆ ಪೋಸ್ ನೀಡಿದ್ದು ಮಕ್ಕಳಿಗಾಗಿ. 

Video Top Stories