
ವಿವಾದದ ಸುತ್ತ ಆದಿಪುರುಷ್ ಸಿನಿಮಾ!
ರಾಮಾಯಣ ಆಧಾರಿತ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾದ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದು, ಕೇವಲ ರಾಮ, ರಾವಣ, ಆಂಜನೇಯ ಅಷ್ಟೆ ಅಲ್ಲದೆ ಸೀತೆ ಗೂ ಅವಮಾನಿಸಲಾಗಿದೆ ಎಂದು ಆದಿಪುರುಷ್ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ನೆಗೆಟಿವ್ ಆಗಿ ಸದ್ದು ಮಾಡುತ್ತಿದ್ದು, ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಭಾಸ್ ಅಭಿಮಾನಿಗಳಿಗೆ ಟೀಸರ್ ನಿರಾಸೆಯನ್ನು ತರಿಸಿದೆ. ಚಿತ್ರದಲ್ಲಿ ಪ್ರಭಾಸ್ ಪಾತ್ರದಲ್ಲಿ ರಾಮನಿಗೆ ಹುರಿ ಮೀಸೆ, ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸೈಫ್ ಅಲಿ ಖಾನ್ ಗಡ್ಡಧಾರಿಯಾಗಿರುವುದರ ಜೊತೆಗೆ ಆಂಜನೇಯನಿಗೆ ಚರ್ಮದ ಬಟ್ಟೆಯನ್ನು ತೊಡಿಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಚಿತ್ರದಲ್ಲಿ ಸೀತೆಯ ಪಾತ್ರ ಮಾಡಿರುವ ಕೃತಿ ತೂಗುಯ್ಯಾಲೆಯಲ್ಲಿ ಹಸಿ ಬಿಸಿಯಾಗಿ ಕಾಣಿಸಿಕೊಂಡಿದ್ದು, ಸೀತೆಯನ್ನ ನೋಡಿದರೆ ಭಕ್ತಿ ಭಾವನೆ ಮೂಡುವುದಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಆದಿಪುರುಷ್ ಒಂದೊಂದೇ ವಿವಾದಗಳನ್ನು ಸುತ್ತಿಕೊಳ್ಳುತ್ತಿದೆ.