
ಗುಡ್ನ್ಯೂಸ್ ಕೊಟ್ಟ ಸಾಯಿ ಪಲ್ಲವಿ: ನಯನತಾರ, ಅನುಷ್ಕಾ ಶೆಟ್ಟಿ ಹಾದಿಯಲ್ಲೇ ನ್ಯಾಚುರಲ್ ಬ್ಯೂಟಿ
ಈಗ ಸಾಯಿ ಮಾಡಲು ಹೊರಟಿರೋ ಕೆಲಸವನ್ನ ಈ ಹಿಂದೆ ನಮ್ಮ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ, ನಯನತಾರ ಹೋಗಿದ್ದ ಹಾದಿಯಲ್ಲೇ ಸಾಗ್ತಿದ್ದಾರೆ.. ಹಾಗಾದ್ರೆ ಏನದು ಅಂತೀರಾ ಈ ಸ್ಟೋರಿ ನೋಡಿ.
ಅಮರನ್ ಸಿನಿಮಾ ಸಕ್ಸಸ್ ಅಲೆಯಲ್ಲಿಯೋ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ತೆಲುಗು ಚಿತ್ರರಂಗದಲ್ಲಿ ಕಮಾಲ್ ಮಾಡೋಕೆ ಕಿಕ್ ಸ್ಟಾರ್ಸ್ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಸಾಯಿ ಪಲ್ಲವಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈಗ ಸಾಯಿ ಮಾಡಲು ಹೊರಟಿರೋ ಕೆಲಸವನ್ನ ಈ ಹಿಂದೆ ನಮ್ಮ ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ, ನಯನತಾರ ಹೋಗಿದ್ದ ಹಾದಿಯಲ್ಲೇ ಸಾಗ್ತಿದ್ದಾರೆ.. ಹಾಗಾದ್ರೆ ಏನದು ಅಂತೀರಾ ಈ ಸ್ಟೋರಿ ನೋಡಿ. ಸಾಯಿ ಪಲ್ಲವಿ ತನ್ನ ನ್ಯಾಚುರಲ್ ಬ್ಯೂಟಿಯಿಂದಲೇ ಪಡ್ಡೆ ಹುಡುಗ್ರ ನಿದ್ದೆ ಕದ್ದಿರೋ ಚೆಲುವೆ.. ಸೌತ್ ಸಿನಿ ಜಗತ್ತಲ್ಲಿ ಸಾಯಿ ಪಲ್ಲವಿ ಟಾಪರ್. ತನ್ನ ಸಹಜ ಸೌಂದರ್ಯ, ಅಭಿನಯದಿಂದ ತೆಲುಗು, ತಮಿಳು ಮಲಯಾಳಂನಲ್ಲಿ ತನ್ನದೇ ಫ್ಯಾನ್ ಬೇಸ್ ಹೋದಿದ್ದಾರೆ.
ಇತ್ತೀಚೆಗೆ ರಿಲೀಸ್ ಆದ ತಮಿಳಿನ ಅಮರನ್ ಸೂಪರ್ ಸಕ್ಸಸ್ ಕಂಡಿತ್ತು. ಈ ಸಕ್ಸಸ್ ಅಲೆಯಲ್ಲಿರೋ ಸಾಯಿಗೆ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಬಿಗ್ ಸ್ಟಾರ್ಗಳ ಸಿನಿಮಾಗಳಿಗೆ ಸಾಯಿ ಪಲ್ಲವಿಗೆ ಆಫರ್ಗಳು ಬರ್ತಿದೆ. ಹೀಗಿರುವಾಗ್ಲೇ ಹೊಸ ಪ್ರಯೋಗಕ್ಕೆ ಸಾಯಿ ಪಲ್ಲವಿ ಮುಂದಾಗಿದ್ದಾರೆ. ಈ ವಿಚಾರ ಕೇಳಿ ಸಾಯಿ ಪಲ್ಲವಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಬಹು ಭಾಷೆಯಲ್ಲಿ ಚಾಲ್ತಿಯಲ್ಲಿರೋ ಈ ಬ್ಯೂಟಿ.. ನಯನತಾರ, ಅನುಷ್ಕಾ ಶೆಟ್ಟಿ ಹಾದಿಯಲ್ಲೇ ಸಾಗ್ತಿದ್ದು, ಈ ವಿಚಾರ ಕೇಳಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಅದೇನಪ್ಪಾ ಅಂದ್ರೆ ಸಾಯಿ ಪಲ್ಲವಿ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.
ಹೌದು, ಕಾರ್ತಿಕ್ ತೀಡಾ ನಿರ್ದೇಶನದ ಅನ್ನಪೂರ್ಣ ಸ್ಟುಡಿಯೋ ನಿರ್ಮಾಣದಲ್ಲಿ ರೆಡಿಯಾಗ್ತಿರೋ ಸಿನಿಮಾದಲ್ಲಿ ಸಾಯಿ Act ಮಾಡಲಿದ್ದಾರೆ. ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಅಂದ್ಹಾಗೆ ಸಾಯಿ ಪಲ್ಲವಿ ಈ ಹಿಂದೆಯೂ ಕೂಡ ಫೀಮೇಲ್ ಓರಿಯಂಟೆಂಡ್ ಸಿನಿಮಾಗಳಲ್ಲಿ ನಟಿಸಿದ್ದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಿದ್ದಾರೆ. ಇಷ್ಟು ದಿನ ಮಲೆಯಾಳಂನಲ್ಲಿ ಈ ರೀತಿಯ ಸಿನಿಮಾಗಳನ್ನ ಮಾಡ್ತಿದ್ದ ಸಾಯಿಪಲ್ಲವಿ ಈಗ ತೆಲುಗಿನಲ್ಲೂ ಅಂಥದ್ಧೇ ಹೆಜ್ಜೆ ಇಡಲು ಮುಂದಾಗಿದ್ದಾರೆ.. ಈ ವಿಚಾರದಿಂದ ಫ್ಯಾನ್ಸ್ ಖುಷ್ ಆಗಿದ್ದು, ತೆರೆ ಮೇಲೆ ಸಾಯಿ ಪಲ್ಲವಿ ಅಬ್ಬರ ನೋಡಲು ಕಾತುರದಿಂದ ಕಾಯ್ತಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ಸಾಯಿ ಪಲ್ಲವಿ ನಟಿಸಿದ್ದ ಫಿದಾ ಸಿನಿಮಾ ಸಾಕಷ್ಟು ಹೆಸರು ತಂದುಕೊಟ್ಟಿತ್ತು.