New Year Celebration: ಗೋವಾದಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ ರಶ್ಮಿಕಾ-ವಿಜಯ್

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಮಧ್ಯೆ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಇಂದು - ನಿನ್ನೆಯದ್ದಲ್ಲ. ಇವರಿಬ್ಬರ ಮಧ್ಯೆ ಏನೋ ಇದೆ ಎಂಬ ಮಾತುಗಳು ಟಾಲಿವುಡ್ ಸಿನಿ ಅಂಗಳದಲ್ಲಿ ಕೇಳಿಬರುತ್ತಲೇ ಇದೆ. ಅದಕ್ಕೆ ಸಾಕ್ಷಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಸೇರಿ ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿದ್ದಾರಂತೆ.

First Published Jan 2, 2022, 4:07 PM IST | Last Updated Jan 2, 2022, 4:06 PM IST

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಮಧ್ಯೆ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಇಂದು - ನಿನ್ನೆಯದ್ದಲ್ಲ. 'ಗೀತ ಗೋವಿಂದಂ' ಸಿನಿಮಾ ತೆರೆಕಂಡಾಗಿನಿಂದಲೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮಧ್ಯೆ ಏನೋ ಇದೆ ಎಂಬ ಮಾತುಗಳು ಟಾಲಿವುಡ್ ಸಿನಿ ಅಂಗಳದಲ್ಲಿ ಕೇಳಿಬರುತ್ತಲೇ ಇದೆ. ಅದಕ್ಕೆ ಸಾಕ್ಷಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಸೇರಿ ಹೊಸ ವರ್ಷವನ್ನು (New Year) ಗೋವಾದಲ್ಲಿ (Goa) ಆಚರಿಸಿದ್ದಾರಂತೆ.

Rashmika Mandanna: ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ!

ಹೌದು! ರೆಸಾರ್ಟ್‌ನ ಹೈಫೈ ಹೋಟೆಲ್‌ನಲ್ಲಿ ನ್ಯೂ ಇಯರ್ ಆಚರಿಸಿದ್ದಾರಂತೆ ಈ ಜೋಡಿ. ಈ ವಿಚಾರ ಇದೀಗ ಟಾಲಿವುಡ್ (Tollywood) ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನು ಇತ್ತೀಚೆಗಷ್ಟೇ ಮುಂಬೈನ ಬಾಂದ್ರಾದಲ್ಲಿ ರಶ್ಮಿಕಾ ಹಾಗೂ ವಿಜಯ್ ಮೀಟ್ ಆಗಿರುವುದನ್ನು ಕ್ಯಾಮರಾ ಕಣ್ಣುಗಳು ಸೆರೆ ಹಿಡಿದಿವೆ. ಈಗ ಮತ್ತೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವುದು ಗಾಸಿಪ್‌ಗಳಿಗೆ ಕಾರಣವಾಗಿದೆ. ಆದರೆ, ಅದ್ಯಾವುದರ ಬಗ್ಗೆಯೂ ರಶ್ಮಿಕಾ ಆಗಲಿ, ವಿಜಯ್ ಆಗಲಿ ತಲೆ ಕೆಡಿಸಿಕೊಂಡಿಲ್ಲ. ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡಲು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮುಂದಾಗಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment