ಮುಂಬೈನಲ್ಲಿ ಕೀರ್ತಿ ಸುರೇಶ್‌ಗೆ ಅವಮಾನ, ನಗುಮುಖದಿಂದಲೇ ತಿರುಗೇಟು ಕೊಟ್ಟ ನಟಿ!

ಮದುವೆಯಾದ ಮರುದಿನವೇ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡ ಕೀರ್ತಿ ಸುರೇಶ್ಗೆ ಮುಂಬೈನಲ್ಲಿ ಅವಮಾನವಾಗಿದೆ. ಅಷ್ಟಕ್ಕೂ ಮಂಬೈನಲ್ಲಿ ಏನಾಯ್ತು?

First Published Dec 30, 2024, 7:09 PM IST | Last Updated Dec 30, 2024, 7:09 PM IST

ಮಹಾನಟಿ ಅಂತಲೇ ಖ್ಯಾತಿ ಪಡೆದಿರೋ ಕೀರ್ತಿ ಸುರೇಶ್ ಇತ್ತೀಚಗಷ್ಟೇ ಗೋವಾದಲ್ಲಿ ವಿವಾಹವಾಗಿದ್ದಾರೆ. ಬಾಲ್ಯದ ಗೆಳೆಯ ಆ್ಯಂಟನಿ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಮದುವೆಯಾಗಿ ಹನಿಮೂನ್, ಪ್ರವಾಸ ಅಂತಾ ಸುತ್ತಾಡದೇ ಕೀರ್ತಿ ಸುರೇಶ್ ಮರು ದಿನದಿಂದಲೇ  ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಸಿನಿಮಾ ಪಬ್ಲಿಸಿಟಿಯಲ್ಲಿ ತೊಡಗಿದ್ದ ಕೀರ್ತಿ ಸುರೇಶ್‌ಗೆ ಮುಂಬೈನಲ್ಲಿ ಅವಮಾನ ಮಾಡಲಾಗಿದೆ. ಕೀರ್ತು ಸುರೇಶ್‌ ಅವಮಾನ ಘಟನೆ ಹೇಗಾಯ್ತು?