ಅಪ್ಪಟ ಕನ್ನಡಿಗ, ನಮ್ಮ ಹೆಮ್ಮೆಯ ರಜನಿಕಾಂತ್‌: ತಲೈವಾ ಬಾಳಿನ ರೋಚಕ ಅಧ್ಯಾಯ!

ರಜನಿಕಾಂತ್ ಅಂದ್ರೆ ಸಿನಿಮಾ ಹೇಗೆ ನೆನಪಾಗುತ್ತೋ, ಅದೇ ಥರ ಅವರು ಪಟ್ಟಕಷ್ಟವೂ ನೆನಪಾಗ್ಬೇಕು,. ಅದ್ಯಾಕೆ ಅಂತ ಗೊತ್ತಾಗ್ಬೇಕು ಅಂದ್ರೆ, ನೀವು ರಜನಿಯ ಬೆಂಗಳೂರು ಡೇಸ್ ಕತೆ ಕೇಳ್ಬೇಕು.

Share this Video
  • FB
  • Linkdin
  • Whatsapp

ಬೆಂಗಳೂರು(ಜ.21): ತಲೈವಾ ರಜನಿಕಾಂತ್.. ಯಾರಿಗ್ ಗೊತ್ತಿಲ್ಲ ಹೇಳಿ ಈ ಹೆಸರು.. ರಜನಿಕಾಂತ್ ಅನ್ನೋ ಪದ ಕಿವಿಗೆ ಬಿದ್ರೆ ಸಾಕು, ಎಂಥವರಲ್ಲೂ ಎನರ್ಜಿ ಬಂದುಬಿಡುತ್ತೆ.. ಅವರು ತಮಿಳು ಸಿನಿಮಾ ಹೀರೋ, ಹಾಗಾಗಿ ಅಲ್ಲಿನ ಜನ ಇಷ್ಟ ಪಡ್ತಾರೆ.. ಆದ್ರೆ, ಕನ್ನಡಿಗರಿಗೂ ರಜನಿ ಅಂದ್ರೆ ಪಂಚಪ್ರಾಣ.. ಅದಕ್ಕೇನು ಕಾರಣ? ಏನದರ ಪರಿಣಾಮ.. ಅದುನ್ನ ನಾವಿವತ್ತು ತೋರಿಸ್ತೀವಿ ನೋಡಿ.

ರಜನಿಕಾಂತ್ ಅಂದ್ರೆ ಸಿನಿಮಾ ಹೇಗೆ ನೆನಪಾಗುತ್ತೋ, ಅದೇ ಥರ ಅವರು ಪಟ್ಟಕಷ್ಟವೂ ನೆನಪಾಗ್ಬೇಕು,. ಅದ್ಯಾಕೆ ಅಂತ ಗೊತ್ತಾಗ್ಬೇಕು ಅಂದ್ರೆ, ನೀವು ರಜನಿಯ ಬೆಂಗಳೂರು ಡೇಸ್ ಕತೆ ಕೇಳ್ಬೇಕು.

ಕನ್ನಡ ಮಾಧ್ಯಮದಲ್ಲಿ ಫಸ್ಟ್‌, ಇಂಗ್ಲಿಷ್‌ನಲ್ಲಿ ನಾನು ಲಾಸ್ಟ್‌: ನಟ ರಜನೀಕಾಂತ್‌

ನಾವೆಲ್ಲಾ ಏನೇ ಮರೆತರೂ ಓದಿದ ಶಾಲೆನಾ, ಶಾಲೇಲಿ ಆಡಿದ ಆಟ ತುಂಟಾಟನಾ ಮರೆಯೋಕೆ ಸಾಧ್ಯವೇ ಇಲ್ಲ.. ರಜನಿ ಅವರದ್ದೂ ಇಂಥದ್ದೇ ಸ್ವಭಾವ.. ಇನ್ ಫ್ಯಾಕ್ಟ್, ನಮ್ಮೆಲ್ಲಿರಿಗಿಂತಾ ಹೆಚ್ಚಿನ ಉತ್ಸಾಹ, ಆಸಕ್ತಿ ಅವರಲ್ಲಿದ್ದ ಹಾಗೇ ಕಾಣುತ್ತೆ.. ಅವರ ಆ ಬಾಲ್ಯ ಹೇಗಿತ್ತು?.

ಇದನ್ನೆಲ್ಲಾ ಕೇಳ್ತಾ ಇದ್ರೆನೇ ರಜನಿ ಅವರ ಮೇಲಿದ್ದ ಅಭಿಮಾನ, ಗೌರವ ದುಪ್ಪಟ್ಟಾಗುತ್ತೆ.. ಇಂಥಾ ಇನ್ನಷ್ಟು ಸಂಗತಿಗಳನ್ನ ನಿಮ್ಮ ಜೊತೆ ಹಂಚಿಕೊಳ್ಳೋದು ಬಾಕಿ ಇದೆ. ರಜನಿಕಾಂತ್ ಅವರ ಬದುಕು ಎಂಥವರಿಗೂ ಪ್ರೇರಣೆ.. ಅಂಥಾ ಮಹಾನ್ ಕಲಾವಿದನ ಬಗ್ಗೆ ನೀವರಿಯದ ಸಂಗತಿಗಳ ಪರಿಚಯ ಇಲ್ಲಿದೆ. 

Related Video