ಹೊಸ ನಿರ್ಧಾರ ತೆಗೆದುಕೊಂಡ ನಯನತಾರ: ಫ್ಯಾನ್ಸ್‌ಗೆ ಬೇಜಾರು!

ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆಯ ನಂತರ ನಯನತಾರಾ ಇದೀಗ ತಮ್ಮ ಸಿನಿಮಾಗಳ ಕುರಿತು ದೊಡ್ಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಕಾಲಿವುಡ್‌ನ ಲೇಡಿ ಸೂಪರ್‌ ಸ್ಟಾರ್ ನಯನತಾರಾ ತಮ್ಮ ಬಹುಕಾಲದ ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆಯ ನಂತರ ನಯನತಾರಾ ಇದೀಗ ತಮ್ಮ ಸಿನಿಮಾಗಳ ಕುರಿತು ದೊಡ್ಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಹೌದು! ನಯನತಾರ ಮದುವೆಯ ನಂತರ ಸಿನಿಮಾಗಳಲ್ಲಿ ತೆರೆಯ ಮೇಲೆ ರೋಮ್ಯಾಂಟಿಕ್ ದೃಶ್ಯಗಳನ್ನು ಮಾಡದಿರಲು ನಿರ್ಧರಿಸಿದ್ದಾರಂತೆ. ಅಲ್ಲದೇ ಚಿತ್ರಗಳಲ್ಲಿ ಚುಂಬಿಸುವ ಅಥವಾ ಯಾವುದೇ ರೀತಿಯ ಆತ್ಮೀಯ ದೃಶ್ಯವನ್ನು ಮಾಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದ್ದು, ಅವರ ಅಭಿಮಾನಿಗಳು ಬೇಜಾರಾಗಿದ್ದಾರೆ. ಒಟ್ಟಿನಲ್ಲಿ ನಯನತಾರಾ ಈ ನಿರ್ಧಾರ ಸಿನಿಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video