'ಕಾಂತಾರ' ಸೃಷ್ಟಿಸಿದ ದಾಖಲೆಗಳನ್ನು ಧೂಳಿಪಟ ಮಾಡಿ: ರಿಷಬ್ ಶೆಟ್ಟಿಗೆ ಕಮಲ್ ಹಾಸನ್ ಪತ್ರ

ಕಾಂತಾರ ನೆನಪಿನಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ನಟ ಕಮಲ್ ಹಾಸನ್ ಸುದೀರ್ಘವಾದ ಮೆಚ್ಚುಗೆಯ ಪತ್ರ ಬರೆದಿದ್ದಾರೆ. 
 

Share this Video
  • FB
  • Linkdin
  • Whatsapp

ಕಮಲ್ ಹಾಸನ್ ಎಂಬ ಮಹಾನ್ ನಟನಿಗೆ ಕಾಂತಾರದ ಗುಂಗು ಇವತ್ತಿಗೂ ಒಂದ್ ಚೂರು ಕಡಿಮೆ ಆಗಿಲ್ಲ. ಇದೀಗ ಕಮಲ್ ಹಾಸನ್, ರಿಷಬ್ ಶೆಟ್ಟಿಗೆ ಪತ್ರ ಬರೆದಿದ್ದಾರೆ. 'ಕಾಂತಾರ'ದಂತಹ ಸಿನಿಮಾಗಳು ನಮ್ಮ ಮನದಲ್ಲಿ ಅರಳುತ್ತವೆ. ನಾನು ದೇವರನ್ನು ನಂಬುವುದಿಲ್ಲ. ಆದರೂ ಅದರ ಅಗತ್ಯವನ್ನು ಹೆಚ್ಚಿನವರಲ್ಲಿ ನೋಡಿ ಅರ್ಥೈಸಿಕೊಂಡಿದ್ದೇನೆ. ನಮ್ಮ ಹೆಚ್ಚಿನ ಪುರಾಣಗಳಲ್ಲಿ ಚಿತ್ರಿಸಿರುವ ದೇವರುಗಳಲ್ಲಿ ಸಹಾನುಭೂತಿಯ ಕೊರತೆಯಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ದ್ರಾವಿಡರಾದ ನಮ್ಮದು ಮಾತೃಪ್ರಧಾನ ಸಮಾಜ. ಅದು ನಿಮ್ಮ ಚಿತ್ರದ ಕೊನೆಯ ದೃಶ್ಯದಲ್ಲಿ ಇದೆ. ಅಲ್ಲಿ ದೇವರು ತಂದೆಗಿಂತ ಹೆಚ್ಚಾಗಿ ತಾಯಿಯಂತೆ ವರ್ತಿಸುತ್ತಾರೆ. ನಿಮ್ಮ ಮುಂದಿನ ಚಿತ್ರದ ಮೂಲಕ 'ಕಾಂತಾರ' ಸೃಷ್ಟಿಸಿರುವ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ. ಅರ್ಹರಿಗೆ ಅದೃಷ್ಟ ಎಂಬುದಿಲ್ಲ ಎಂದು ಪತ್ರ ಬರೆದಿದ್ದಾರೆ. ಕಮಲ್ ಸರ್ ನೀಡಿದ ಈ ಅಚ್ಚರಿಯ ಗಿಫ್ಟ್ ನೋಡಿ ಅಪಾರ ಸಂತಸ ಆಗಿದೆ’ ಅಂತ ಬರೆದುಕೊಂಡಿರೋ ರಿಷಬ್ ಶೆಟ್ಟಿ, ಕಮಲ್ ಹಾಸನ್ ಬರೆದ ಪತ್ರವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಬಾಹುಬಲಿ-3 ಮಾಡೋಕೆ ರಾಜಮೌಳಿ ಸಿದ್ಧತೆ?: ಜಕ್ಕಣ್ಣನ ಬಿಗ್ ಪ್ಲಾನ್ ಏನು?

Related Video