ಚಿಕ್ಕಮಗಳೂರು ಅತಿರಥರ ಅಖಾಡ: ಲಿಂಗಾಯತ VS ಒಕ್ಕಲಿಗ ಸ್ಪರ್ಧೆಗೆ ವೇದಿಕೆಯಾಗುತ್ತಾ ಕಾಫಿನಾಡು..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಚಿಕ್ಕಮಗಳೂರು ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.
 

Share this Video
  • FB
  • Linkdin
  • Whatsapp

ಮಲೆನಾಡು , ಬಯಲುಸೀಮೆಯನ್ನು ಒಳಗೊಂಡಿರುವ ಜಿಲ್ಲೆ ಕಾಫಿನಾಡು ಚಿಕ್ಕಮಗಳೂರು .ವಾಣಿಜ್ಯ ಬೆಳೆಗಳಿಂದ ಪ್ರಸಿದ್ದಯನ್ನು ಪಡೆದಿರುವ ಜಿಲ್ಲೆ ರಾಜಕೀಯವಾಗಿಯೂ ಹೆಸರುವಾಸಿಯಾಗಿದೆ.2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನ ಕಂಡವರು ಸಿಟಿ ರವಿ. ಕಾಂಗ್ರೆಸ್ಸಿನ ಬಿಎಲ್ ಶಂಕರ್ ವಿರುದ್ಧ 26314 ಮತಗಳ ಅಂತರದಿಂದ ಒಟ್ಟೂ 70863 ಮತಗಳನ್ನ ಪಡೆದಿದ್ರು. ಜೆಡಿಎಸ್ ಮೂರನೇ ಸ್ಥಾನದಲ್ಲಿ ಇತ್ತು. ಹಿಂದುತ್ವ ಹಾಗೂ ಅಭಿವೃದ್ಧಿ ಮಂತ್ರವನ್ನ ಪಠಿಸೋ ಸಿಟಿ ರವಿ ಈ ಬಾರಿಯೂ ಸ್ಫರ್ಧೆ ಮಾಡ್ತಾ ಇರೋದ್ರಿಂದ ಚಿಕ್ಕಮಗಳೂರು ಹೈವೋಲ್ಟೇಜ್ ಕ್ಷೇತ್ರವಾಗಿದೆ. ಗ್ರಾಮೀಣ ಮಟ್ಟದಿಂದ ಬೆಳೆದು ಬಂದ ಅವರು ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿ ಉಸ್ತುವಾರಿ. ಅಕ್ಟೋಬರ್‌ನಲ್ಲಿ ಸಿ. ಟಿ. ರವಿ ಪಕ್ಷ ಸಂಘಟನೆಗಾಗಿ ಹೈಕಮಾಂಡ್ ತೀರ್ಮಾನದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2020 ಬಿಜೆಪಿ ಸಿ. ಟಿ. ರವಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿತು. ಈ ಬಾರಿ ಗೆದ್ದರೆ ಸತತ 5ನೇ ಬಾರಿ ಗೆಲ್ಲೋ ಮೂಲಕ ಚಿಕ್ಕಮಗಳೂರಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

Related Video